ಏಕಕಾಲದಲ್ಲಿ ಬಹು ಆ್ಯಪ್‌ಗಳಲ್ಲಿ ಕಾರ್ಯಗಳಿಗೆ ಸಹಾಯ ಪಡೆಯಿರಿ
ಆ್ಯಪ್‌ಗಳೊಂದಿಗೆ, ನೀವು ಈಗ ನಿಮ್ಮ Gmail ನಿಂದ ಸಾರಾಂಶಗಳನ್ನು ಪಡೆಯಬಹುದು, Google Keep ನಲ್ಲಿ ನಿಮ್ಮ ದಿನಸಿ ಖರೀದಿಸುವ ಪಟ್ಟಿಗೆ ವಸ್ತುಗಳನ್ನು ಸುಲಭವಾಗಿ ಸೇರಿಸಬಹುದು, Google Maps ನಲ್ಲಿ ನಿಮ್ಮ ಸ್ನೇಹಿತರ ಪ್ರಯಾಣ ಸಲಹೆಗಳನ್ನು ತಕ್ಷಣವೇ ರೂಪಿಸಬಹುದು, YouTube Music ನಲ್ಲಿ ಕಸ್ಟಮ್ ಪ್ಲೇಪಟ್ಟಿಯನ್ನು ಕ್ಯುರೇಟ್ ಮಾಡಬಹುದು ಮತ್ತು ಇತ್ಯಾದಿಗಳನ್ನು ಮಾಡಬಹುದು.
ನಿಮ್ಮ ಇಮೇಲ್‌ಗಳಲ್ಲಿ ಸರಿಯಾದ ಮಾಹಿತಿಯನ್ನು ಹುಡುಕಿ
ಕೆಲವು ಸಂಪರ್ಕಗಳಿಂದ ಬಂದ ಇಮೇಲ್‌ಗಳನ್ನು ಸಾರಾಂಶ ಮಾಡಲು ಅಥವಾ ನಿಮ್ಮ ಇನ್‌ಬಾಕ್ಸ್‌ನಲ್ಲಿ ನಿರ್ದಿಷ್ಟ ಮಾಹಿತಿಯನ್ನು ಹುಡುಕಲು Gemini ಅನ್ನು ಕೇಳಿ.
ಹೊಸ ಸಂಗೀತಕ್ಕೆ ಜ್ಯಾಮ್ ಮಾಡಿ
ನಿಮ್ಮ ನೆಚ್ಚಿನ ಹಾಡುಗಳು, ಕಲಾವಿದರು ಮತ್ತು ಪ್ಲೇಪಟ್ಟಿಗಳನ್ನು ಪ್ಲೇ ಮಾಡಿ, ಹುಡುಕಿ ಮತ್ತು ಅನ್ವೇಷಿಸಿ. Gemini ಯಾವುದೇ ಕ್ಷಣಕ್ಕೂ ಸೂಕ್ತವಾದ ಪ್ಲೇಪಟ್ಟಿಯನ್ನು ರಚಿಸಲು ಅವಕಾಶ ಮಾಡಿಕೊಡಿ - ಉದಾ: 2020 ರ ನಂತರ ಬಿಡುಗಡೆಯಾಗಿರುವ ಟಾಪ್ ಹಾಡುಗಳ ಕ್ಯುರೇಟೆಡ್ ಪ್ಲೇಪಟ್ಟಿ.
ನಿಮ್ಮ ದಿನವನ್ನು ಉತ್ತಮವಾಗಿ ಪ್ಲಾನ್ ಮಾಡಿ
Gemini ನಿಮ್ಮ ಕ್ಯಾಲೆಂಡರ್ ಅನ್ನು ಆರ್ಗನೈಜ್ ಮಾಡಲಿ ಮತ್ತು ಈವೆಂಟ್‌ಗಳನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡಲು ಅವಕಾಶ ಮಾಡಿಕೊಡಿ. ಕಾನ್ಸರ್ಟ್‌ನ ಫ್ಲೈಯರ್‌ನ ಫೋಟೋ ತೆಗೆದುಕೊಂಡು ಆ ವಿವರಗಳ ಆಧಾರದ ಮೇಲೆ ಕ್ಯಾಲೆಂಡರ್ ಈವೆಂಟ್ ರಚಿಸಲು Gemini ಅನ್ನು ಕೇಳಿ.
ವಿಶ್ವಾಸಾರ್ಹ ಪಠ್ಯಪುಸ್ತಕಗಳಿಂದ ಜ್ಞಾನವನ್ನು ಪಡೆಯಿರಿ
ರೈಸ್ ವಿಶ್ವವಿದ್ಯಾಲಯದ ಶೈಕ್ಷಣಿಕ ಲಾಭರಹಿತ ಉಪಕ್ರಮವಾದ OpenStax ಮೂಲಕ, Gemini ಶೈಕ್ಷಣಿಕ ಪಠ್ಯಪುಸ್ತಕಗಳಿಂದ ಮಾಹಿತಿಯನ್ನು ಪಡೆಯಬಹುದು. ಯಾವುದೇ ಪರಿಕಲ್ಪನೆ ಅಥವಾ ವಿಷಯದ ಬಗ್ಗೆ Gemini ಅನ್ನು ಕೇಳಿ ಮತ್ತು ಸಂಬಂಧಿತ ಪಠ್ಯಪುಸ್ತಕದ ಕಂಟೆಂಟ್‌ನ ಲಿಂಕ್‌ಗಳೊಂದಿಗೆ ಸಂಕ್ಷಿಪ್ತ ವಿವರಣೆಯನ್ನು ಪಡೆಯಿರಿ.