Gemini Canvas
ನಿಮ್ಮ ಐಡಿಯಾಗಳಿಗೆ ಆ್ಯಪ್‌ಗಳು, ಗೇಮ್‌ಗಳು, ಇನ್ಫೋಗ್ರಾಫಿಕ್ಸ್ ಹಾಗೂ ಇತ್ಯಾದಿಗಳಾಗಿ ಜೀವ ತುಂಬಿ. ನಮ್ಮ ಅತ್ಯಂತ ಸಮರ್ಥ ಮಾಡಲ್ ಆದ Gemini 2.5 Pro ಸಾಮರ್ಥ್ಯದ ನೆರವಿನಿಂದ ಪ್ರಾಂಪ್ಟ್ ಅನ್ನು ಪ್ರೊಟೊಟೈಪ್ ಆಗಿ ನಿಮಿಷಗಳಲ್ಲಿ ಬದಲಿಸಿ.
Canvas ಎಂದರೇನು
ವಿಷುವಲೈಜ್ ಮಾಡಿ ಹಾಗೂ ವೈಯಕ್ತಿಕಗೊಳಿಸಿ
ನಿಮ್ಮ Deep Research ವರದಿಗಳನ್ನು ಆ್ಯಪ್‌ಗಳು, ಗೇಮ್‌ಗಳು, ಇಂಟರ‍್ಯಾಕ್ಟಿವ್ ಕ್ವಿಜ್‌ಗಳು, ವೆಬ್ ಪುಟಗಳು, ಇನ್ಫೋಗ್ರಾಫಿಕ್ಸ್ ಆಗಿ ಪರಿವರ್ತಿಸಿ, ಇದರಿಂದ ನೀವು ಕಲಿಯುವ, ಎಕ್ಸ್‌ಪ್ಲೋರ್ ಮಾಡುವ ಮತ್ತು ಒಳನೋಟಗಳನ್ನು ಹಂಚಿಕೊಳ್ಳುವ ವಿಧಾನವು ಪರಿವರ್ತನೆಗೊಳ್ಳುತ್ತದೆ.
ಪ್ರಾಂಪ್ಟ್ ನೀಡಿ ಹಾಗೂ ರಚಿಸಿ
ನಿಮ್ಮ ಐಡಿಯಾವನ್ನು ವಿವರಿಸಿ ಹಾಗೂ Canvas ನಿಮ್ಮ ಐಡಿಯಾಗೆ ಕಾರ್ಯನಿರ್ವಹಿಸುವ, ಹಂಚಿಕೊಳ್ಳಬಹುದಾದ ಆ್ಯಪ್ ಅಥವಾ ಗೇಮ್ ಆಗಿ ಜೀವ ತುಂಬುವ ಕೋಡ್ ಅನ್ನು ಹೇಗೆ ಜನರೇಟ್ ಮಾಡುತ್ತದೆ ಎಂಬುದನ್ನು ವೀಕ್ಷಿಸಿ.
ಡ್ರಾಫ್ಟ್ ಮಾಡಿ ಹಾಗೂ ರೀಫೈನ್ ಮಾಡಿ
ಆಕರ್ಷಕ ಡ್ರಾಫ್ಟ್‌ಗಳನ್ನು ಜನರೇಟ್ ಮಾಡುವುದು, ಅದರ ಟೋನ್ ಅನ್ನು ನಿಖರವಾಗಿ ಅಡ್ಜಸ್ಟ್ ಮಾಡುವುದು, ಪ್ರಮುಖ ವಿಭಾಗಗಳನ್ನು ಉತ್ತಮಗೊಳಿಸುವುದು ಮತ್ತು ತ್ವರಿತ, ಒಳನೋಟವುಳ್ಳ ಫೀಡ್‌ಬ್ಯಾಕ್ ಪಡೆಯುವ ಮೂಲಕ ನಿಮ್ಮ ಬರವಣಿಗೆಯನ್ನು ಮೇಲ್ಮಟ್ಟಕೇರಿಸಿ.
ಸ್ಟಡಿ ಗೈಡ್‌ಗಳು ಮತ್ತು ಸೋರ್ಸ್‌ಗಳನ್ನು ಅಪ್‌ಲೋಡ್ ಮಾಡಿ, ಕಲಿಕೆಯನ್ನು ಇನ್ನಷ್ಟು ತೊಡಗಿಸಿಕೊಳ್ಳುವ ಹಾಗೆ ಮಾಡಲು Gemini ಕಸ್ಟಮ್ ಕ್ವಿಜ್ ಅನ್ನು ರಚಿಸುತ್ತದೆ. ನಿಮ್ಮ ತಿಳುವಳಿಕೆಯನ್ನು ಮೌಲ್ಯಮಾಪನ ಮಾಡಲು ಅದನ್ನು ಬಳಸಿ ಅಥವಾ ಫನ್ ಚಾಲೆಂಜ್‌ಗಾಗಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೊತೆ ಲಿಂಕ್ ಅನ್ನು ಹಂಚಿಕೊಳ್ಳಿ.
ಆ್ಯನಿಮೇಶನ್‌ಗಳ ಮುಖಾಂತರ ಅಲ್ಗಾರಿದಮ್‌ಗಳಿಗೆ ಜೀವ ಬರುವುದನ್ನು ನೋಡುವ ಮೂಲಕ ಅಬ್‌ಸ್ಟ್ರ್ಯಾಕ್ಟ್ ಕಾನ್ಸೆಪ್ಟ್‌ಗಳ ಕುರಿತಾದ ನಿಮ್ಮ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ, ಇದರಿಂದ ಸಂಕೀರ್ಣ ಐಡಿಯಾಗಳು ಸ್ಪಷ್ಟವಾದ ಮಾಹಿತಿ ನೀಡುವ ಸಾರಾಂಶಗಳಾಗಿ ಬದಲಾಗುತ್ತವೆ ಹಾಗೂ ಕೋಡ್ ಹೇಗೆ ಕೆಲಸ ಮಾಡುತ್ತದೆ ಎಂಬುದು ನಿಮಗೆ ತಿಳಿಯುತ್ತದೆ.
Gemini ನೆರವಿನಿಂದ ನಿಮ್ಮ ಡಾಕ್ಯುಮೆಂಟ್‌ಗಳು, ಸಂಶೋಧನೆ ಅಥವಾ ಭಾಷಣಗಳನ್ನು ಉತ್ತಮಗೊಳಿಸಿ. ತ್ವರಿತ ಎಡಿಟಿಂಗ್ ಟೂಲ್‌ಗಳು ಪ್ರಮುಖ ವಿಭಾಗಗಳನ್ನು ವಿಸ್ತರಿಸಲು, ಟೋನ್ ಅಡ್ಜಸ್ಟ್ ಮಾಡಲು ಮತ್ತು ನಿಮ್ಮ ಡ್ರಾಫ್ಟ್ ಕುರಿತು ಒಳನೋಟವುಳ್ಳ ಫೀಡ್‌ಬ್ಯಾಕ್ ಪಡೆಯಲು ನಿಮಗೆ ಸಹಾಯ ಮಾಡುತ್ತವೆ.
Gemini ನೆರವಿನಿಂದ ವಿಶ್ಲೇಷಣೆಯನ್ನು ವೇಗವಾಗಿ ಸ್ಟ್ರ್ಯಾಟಜಿಯಾಗಿ ಪರಿವರ್ತಿಸಿ, ಇದರಿಂದ ಬ್ರೈನ್‌ಸ್ಟಾರ್ಮ್ ಮಾಡುವುದು, ಶಿಫಾರಸುಗಳನ್ನು ಪಡೆಯುವುದು ಮತ್ತು ಸಮಯ ಉಳಿಸುವುದಕ್ಕಾಗಿ ಹಾಗೂ ಉತ್ತಮವಾಗಿ ಕೆಲಸ ನಿಭಾಯಿಸುವುದಕ್ಕಾಗಿ ಉನ್ನತ ಗುಣಮಟ್ಟದ ಫಲಿತಾಂಶಗಳನ್ನು ತ್ವರಿತವಾಗಿ ರೀಫೈನ್ ಮಾಡಲು ಸಹಾಯ ದೊರೆಯುತ್ತದೆ.
ಟೀಮ್ ಟ್ರ್ಯಾಕರ್‌ಗಳಿಂದ ಹಿಡಿದು ಕಸ್ಟಮರ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳು ಮತ್ತು ಮಾರಾಟಗಳ ಪೈಪ್‌ಲೈನ್‌ಗಳವರೆಗೆ ಕಸ್ಟಮ್-ಬಿಲ್ಟ್ ಡ್ಯಾಶ್‌ಬೋರ್ಡ್‌ಗಳ ಸೌಲಭ್ಯವನ್ನು ನಿಮ್ಮ ತಂಡಗಳಿಗೆ ಒದಗಿಸಿ, ಇದರಿಂದ ಎಲ್ಲರಿಗೂ ಮಾಹಿತಿ ದೊರೆಯುತ್ತಿರುತ್ತದೆ ಮತ್ತು ವರ್ಕ್‌ಫ್ಲೋಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬಹುದು.
ಇಂಟರ‍್ಯಾಕ್ಟಿವ್ ಬೆಲೆ ಸ್ಲೈಡರ್ ನೆರವಿನಿಂದ ಅಂದಾಜುಗಳನ್ನು ನೈಜ ಸಮಯದಲ್ಲಿ ತ್ವರಿತವಾಗಿ ರಚಿಸಿ ಮತ್ತು ಕಸ್ಟಮೈಸ್ ಮಾಡಿ. ಮಾತುಕತೆಗಳನ್ನು ಬೆಳೆಸುವ ಮತ್ತು ಪರಿವರ್ತನೆಯನ್ನು ಹೆಚ್ಚಿಸುವ ತ್ವರಿತ, ವೈಯಕ್ತಿಕಗೊಳಿಸಿದ ಪ್ರಸ್ತಾಪಗಳನ್ನು ನೀಡಲು ನಿಮ್ಮ ತಂಡವನ್ನು ಸಬಲಗೊಳಿಸಿ.
ನಿಮ್ಮದೇ ಆದ ಕಾಲ್ಪನಿಕ 3D ಲೋಕಗಳನ್ನು ಜನರೇಟ್ ಮಾಡಿ. ಅನನ್ಯ ವಿಶೇಷತೆಗಳನ್ನು ಹೊಂದಿರುವ ವೈವಿಧ್ಯಮಯ ಪ್ಲಾನೆಟ್‌ಗಳನ್ನು ತಕ್ಷಣವೇ ರೆಂಡರ್ ಮಾಡಲು ಸ್ಪೇಸ್‌ಬಾರ್ ಒತ್ತಿರಿ.
ಫನ್ ಚಾಲೆಂಜ್‌ಗಾಗಿ ನಿಮ್ಮ ಆಡಿಯೋ ಮೆಮೊರಿಯನ್ನು ಟೆಸ್ಟ್ ಮಾಡಿ. ಕಾರ್ಡ್‌ಗಳನ್ನು ಕ್ಲಿಕ್ ಮಾಡಿ, ಸೌಂಡ್‌ಗಳನ್ನು ಆಲಿಸಿ ಮತ್ತು ಮ್ಯಾಚ್ ಆಗುವ ಪೇರ್‌ಗಳನ್ನು ಹುಡುಕಿ.
ವಿವಿಧ ಸೌಂಡ್‌ಗಳನ್ನು ಪ್ರಯೋಗ ಮಾಡಲು ಮತ್ತು ನಿಮ್ಮದೇ ಆದ ಮೆಲೋಡಿಗಳನ್ನು ರಚಿಸಲು ಡಿಜಿಟಲ್ ಸಿಂಥಸೈಜರ್‌ನಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿ.
ಅಲ್ಗಾರಿದಮ್‌ಗಳು ಕಾರ್ಯರೂಪಕ್ಕೆ ಬರುವುದನ್ನು ವಿಷುವಲೈಜ್ ಮಾಡಿ, ಉದಾಹರಣೆಗೆ Breadth-First Search ಅಲ್ಗಾರಿದಮ್. ಆರಂಭದ ಪಾಯಿಂಟ್‌ನಿಂದ ಕೊನೆಯ ಪಾಯಿಂಟ್‌ವರೆಗೆ ಅಲ್ಗಾರಿದಮ್‌ನ ಪಾಥ್ ಅನ್ನು ಫಾಲೋ ಮಾಡಲು ಈ ಗ್ರಿಡ್ ಅನ್ನು ಬಳಸಿ ಹಾಗೂ ಅಡೆತಡೆಗಳ ಹೊರತಾಗಿಯೂ ಅಲ್ಗಾರಿದಮ್ ಸಾಧ್ಯವಾದಷ್ಟು ಸಮೀಪದ ಪಾಥ್ ಅನ್ನು ಹುಡುಕಿದಾಗ ಭೇಟಿ ನೀಡಿದ ಪ್ರತಿಯೊಂದು ಸೆಲ್ ಹೈಲೈಟ್ ಆಗುವುದನ್ನು ವೀಕ್ಷಿಸಿ.
ಪದೇಪದೇ ಕೇಳಲಾಗುವ ಪ್ರಶ್ನೆಗಳು
ಪ್ರಾರಂಭಿಸುವುದು ಸುಲಭ. ಪ್ರಾಂಪ್ಟ್ ಬಾರ್ ಕೆಳಗೆ, "Canvas" ಎಂಬುದನ್ನು ಆಯ್ಕೆಮಾಡಿ ಮತ್ತು ಡಾಕ್ಯುಮೆಂಟ್ ಅಥವಾ ಕೋಡಿಂಗ್ ಪ್ರಾಜೆಕ್ಟ್ ಪ್ರಾರಂಭಿಸಲು ನಿಮ್ಮ ಪ್ರಾಂಪ್ಟ್ ಅನ್ನು ನಮೂದಿಸಿ.
ಎಲ್ಲಾ Gemini ಬಳಕೆದಾರರಿಗೆ Canvas ಲಭ್ಯವಿದೆ. Google AI Pro ಮತ್ತು Google AI Ultra ಸಬ್‌ಸ್ಕ್ರೈಬರ್‌ಗಳು Canvas ಅನ್ನು ಆ್ಯಕ್ಸೆಸ್ ಮಾಡಬಹುದು, ಜೊತೆಗೆ ನಮ್ಮ ಅತ್ಯಂತ ಸಮರ್ಥ ಮಾಡಲ್ ಆದ Gemini 2.5 Pro ಮತ್ತು ಹೆಚ್ಚು ಸಂಕೀರ್ಣ ಪ್ರಾಜೆಕ್ಟ್‌ಗಳನ್ನು ನಿಭಾಯಿಸಲು ನೆರವಾಗುವ ಗಮನಾರ್ಹವಾಗಿ ದೊಡ್ಡದಾದ 1 ಮಿಲಿಯನ್ ಟೋಕನ್ ಕಾಂಟೆಕ್ಸ್ಟ್ ವಿಂಡೋವನ್ನು ಸಹ ಅವರು ಬಳಸಿಕೊಳ್ಳಬಹುದು.
ಪ್ರಾಂಪ್ಟ್ ಬಾರ್ ಕೆಳಗಿರುವ Deep Research ಅನ್ನು ಆಯ್ಕೆಮಾಡಿ. ನಿಮ್ಮ Deep Research ವರದಿಯನ್ನು ಹೊಸ Canvas ನಲ್ಲಿ ಜನರೇಟ್ ಮಾಡಲಾಗುತ್ತದೆ. ಸಂಶೋಧನೆ ಪೂರ್ಣಗೊಂಡ ನಂತರ, Canvas ನ ಮೇಲಿನ ಬಲಭಾಗದಲ್ಲಿ "ರಚಿಸಿ" ಎಂಬ ಬಟನ್ ನಿಮಗೆ ಕಾಣಿಸುತ್ತದೆ. "ರಚಿಸಿ" ಮೇಲೆ ಕ್ಲಿಕ್ ಮಾಡಿ, ಆಗ ಡ್ರಾಪ್-ಡೌನ್ ಮೆನು ವೆಬ್ ಪುಟ, ಇನ್ಫೋಗ್ರಾಫಿಕ್, ಕ್ವಿಜ್ ಅಥವಾ ಆಡಿಯೋ ಓವರ್‌ವ್ಯೂ ರಚಿಸಲು ಆಯ್ಕೆಗಳನ್ನು ನೀಡುತ್ತದೆ. ಈ ಆಯ್ಕೆಗಳಲ್ಲಿ ಒಂದನ್ನು ಆರಿಸಿ, Canvas ಅದಕ್ಕೆ ಜೀವ ತುಂಬುವುದನ್ನು ವೀಕ್ಷಿಸಿ.
ಹೌದು, ನೀವು ನಿಮ್ಮ ಮೊಬೈಲ್ ಆ್ಯಪ್‌ನಲ್ಲಿ ಕೂಡ ನಿಮ್ಮ Canvas ಪ್ರಾಜೆಕ್ಟ್‌ಗಳನ್ನು ಆ್ಯಕ್ಸೆಸ್ ಮಾಡಬಹುದು. ಗಮನಿಸಿ, ನೀವು ಡೆಸ್ಕ್‌ಟಾಪ್‌ನಲ್ಲಿರುವ Gemini ವೆಬ್ ಆ್ಯಪ್‌ನಲ್ಲಿ ಪಠ್ಯದ ಶೈಲಿ ಮತ್ತು ಫಾರ್ಮ್ಯಾಟ್ ಅನ್ನು ಮಾತ್ರ ಎಡಿಟ್ ಮಾಡಬಹುದು. ಈ ಫಂಕ್ಷನಾಲಿಟಿ ಮೊಬೈಲ್ ಸಾಧನಗಳಲ್ಲಿ ಲಭ್ಯವಿಲ್ಲ.
Gemini ಆ್ಯಪ್ ಲಭ್ಯವಿರುವ ಎಲ್ಲಾ ಭಾಷೆಗಳು ಮತ್ತು ದೇಶಗಳಲ್ಲಿ Gemini ಬಳಕೆದಾರರಿಗೆ Canvas ಲಭ್ಯವಿದೆ.