ಪ್ರಾಂಪ್ಟ್ ಮೂಲಕ ನಿಮ್ಮ ಫೋಟೋಗಳನ್ನು ರಿಇಮ್ಯಾಜಿನ್ ಮಾಡಿ
ನಿಮ್ಮ ಫೋಟೋಗಳನ್ನು ಇನ್ನಷ್ಟು ಉತ್ತಮಗೊಳಿಸಿ. ವಿಭಿನ್ನ ದೃಶ್ಯಗಳಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಿ, ಸೃಜನಾತ್ಮಕ ಅಂಶಗಳನ್ನು ಸಂಯೋಜಿಸಿ, ನಿರ್ದಿಷ್ಟ ಎಡಿಟ್ಗಳನ್ನು ಮಾಡಿ ಮತ್ತು ಇತ್ಯಾದಿಗಳನ್ನು ಮಾಡಿ. ಇವುಗಳಿಗೆಲ್ಲಾ ನಿಮ್ಮ ಕಲ್ಪನೆಯೊಂದೇ ಮಿತಿ.
ನಿಮ್ಮ ಫೋಟೋಗಳು, ನಿಮ್ಮ ವಿಷನ್
ನಿಮ್ಮನ್ನು ಎಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಿ
ನಿಮ್ಮನ್ನು ವಿಭಿನ್ನ ಸ್ಥಳಗಳಿಗೆ, ಬಟ್ಟೆಗಳಿಗೆ, ಕೇಶವಿನ್ಯಾಸಗಳಿಗೆ ಅಥವಾ ದಶಕಗಳಾಚೆಗೂ ಸಾಗಿಸಿ ನೋಡಿ.
ನಿಮ್ಮ ಫೋಟೋಗಳನ್ನು ಸಂಯೋಜಿಸಿ
ನೀವು ಅನೇಕ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಅವುಗಳನ್ನು ಒಂದೇ ದೃಶ್ಯದಲ್ಲಿ ಸಂಯೋಜಿಸಬಹುದು.
ನಿಮ್ಮ ಫೋಟೋಗಳನ್ನು ರೀಮಿಕ್ಸ್ ಮಾಡಿ
ಒಂದು ವಸ್ತುವಿನ ಶೈಲಿ, ಬಣ್ಣ ಅಥವಾ ವಿನ್ಯಾಸವನ್ನು ವರ್ಗಾಯಿಸಿ ಮತ್ತು ಅದನ್ನು ಇನ್ನೊಂದಕ್ಕೆ ಅನ್ವಯಿಸಿ.
ನಿರ್ದಿಷ್ಟ ಎಡಿಟ್ಗಳನ್ನು ಮಾಡಿ
ಕೇವಲ ಪದಗಳ ಮೂಲಕ ನಿಮ್ಮ ಫೋಟೋಗಳಲ್ಲಿರುವ ನಿರ್ದಿಷ್ಟ ಅಂಶಗಳನ್ನು ಸುಲಭವಾಗಿ ಎಡಿಟ್ ಮಾಡಿ. ಫೋಟೋವನ್ನು ಮರುಸ್ಥಾಪಿಸಿ, ಹಿನ್ನೆಲೆ ಬದಲಾಯಿಸಿ, ವಿಷಯವನ್ನು ಬದಲಾಯಿಸಿ ಮತ್ತು ಇತ್ಯಾದಿಗಳನ್ನು ಮಾಡಿ.
ಸೆಕೆಂಡ್‌ಗಳಲ್ಲಿ ಚಿತ್ರಗಳನ್ನು ರಚಿಸಿ
ನಮ್ಮ ಇದುವರೆಗಿನ ಅತ್ಯುನ್ನತ ಗುಣಮಟ್ಟದ ಟೆಕ್ಸ್ಟ್-ಟು-ಇಮೇಜ್ ಮಾಡಲ್ ಆದ Imagen 4 ಮೂಲಕ Gemini ನಲ್ಲಿ ಅದ್ಭುತ ಚಿತ್ರಗಳನ್ನು ರಚಿಸಿ. ನಿಮ್ಮ ಆಲೋಚನೆಗಳನ್ನು, ಕಣ್ಮನ ಸೂರೆಗೊಳ್ಳುವಂತಹ ವಿವರಗಳು ಮತ್ತು ವಾಸ್ತವಿಕತೆಯಿಂದ ತುಂಬಿರುವ ದೃಶ್ಯಗಳಾಗಿ ಸುಲಭವಾಗಿ ಪರಿವರ್ತಿಸಿ.
ಅಕ್ಷರಶಃ ಹೇಳುವುದಾದರೆ…
Imagen 4 ನಿಖರತೆಯ ಹೊಸ ಲೆವೆಲ್‍ನೊಂದಿಗೆ ಪಠ್ಯವನ್ನು ರೆಂಡರ್ ಮಾಡುತ್ತದೆ.
ಯಾವುದೇ ಗಾತ್ರಾನುಪಾತದಲ್ಲಿ
ಜನರೇಟ್ ಮಾಡಿ.
ಮ್ಯಾಕ್ರೋಗಳು ಸಹ ಕಾಣಿಸುವಂತಹ ಇಮೇಜ್ ಜನರೇಟ್ ಮಾಡಿ
ಯಾವುದೇ ಶೈಲಿಯಲ್ಲಿ ಕನಸು ಕಾಣಿರಿ
ಅತಿವಾಸ್ತವಿಕತೆಯನ್ನು ಎಕ್ಸ್‌ಪ್ಲೋರ್ ಮಾಡಿ
ಪದೇಪದೇ ಕೇಳಲಾಗುವ ಪ್ರಶ್ನೆಗಳು
Gemini ಆ್ಯಪ್ ಲಭ್ಯವಿರುವ ಎಲ್ಲಾ ಭಾಷೆಗಳು ಮತ್ತು ದೇಶಗಳಲ್ಲಿ AI ಇಮೇಜ್ ಜನರೇಶನ್ ಲಭ್ಯವಿದೆ.
ಸರಳ ಸೂತ್ರದೊಂದಿಗೆ ಪ್ರಾರಂಭಿಸಿ. <ವಿಷಯ> <ಕ್ರಿಯೆ> <ದೃಶ್ಯದ> <ಚಿತ್ರವನ್ನು ರಚಿಸಲು/ಜನರೇಟ್ ಮಾಡಲು> ಪ್ರಯತ್ನಿಸಿ ಮತ್ತು ಅದರಿಂದ ನಿರ್ಮಿಸಿ. ಉದಾಹರಣೆಗೆ "ಕಿಟಕಿಯ ಮೇಲೆ ಸೂರ್ಯನ ಬೆಳಕಿನಲ್ಲಿ ನಿದ್ರಿಸುತ್ತಿರುವ ಬೆಕ್ಕಿನ ಚಿತ್ರವನ್ನು ರಚಿಸಿ."
ನೀವು ಕನಸು ಕಾಣುವಷ್ಟು ವಿವರಗಳೊಂದಿಗೆ ನಿರ್ದಿಷ್ಟವಾಗಿರಿ. ಪ್ರಾಂಪ್ಟ್‌ಗಳು ನೀವು ಯೋಚಿಸಬಹುದಾದಷ್ಟು ನಿರ್ದಿಷ್ಟ ಅಂಶಗಳನ್ನು ಒಳಗೊಂಡಿರಬೇಕು, ಆದ್ದರಿಂದ "ಕೆಂಪು ಉಡುಪಿನಲ್ಲಿರುವ ಮಹಿಳೆಯ ಚಿತ್ರವನ್ನು ರಚಿಸು" ಎಂದು ಹೇಳುವ ಬದಲು, "ಕೆಂಪು ಉಡುಪಿನಲ್ಲಿರುವ ಯುವತಿಯು ಉದ್ಯಾನವನದಲ್ಲಿ ಓಡುತ್ತಿರುವ ಚಿತ್ರವನ್ನು ರಚಿಸು" ಎಂದು ಹೇಳಿ ನೋಡಿ. ನೀವು ಹೆಚ್ಚಿನ ವಿವರಗಳನ್ನು ಒದಗಿಸಿದಷ್ಟು, Gemini ನಿಮ್ಮ ಸೂಚನೆಗಳನ್ನು ಉತ್ತಮವಾಗಿ ಅನುಸರಿಸುತ್ತದೆ.
ಸಂಯೋಜನೆ, ಶೈಲಿ ಮತ್ತು ಚಿತ್ರದ ಗುಣಮಟ್ಟವನ್ನು ಪರಿಗಣಿಸಿ. ನಿಮ್ಮ ಚಿತ್ರದಲ್ಲಿನ ಅಂಶಗಳನ್ನು ಹೇಗೆ ಜೋಡಿಸಬೇಕು (ಸಂಯೋಜನೆ), ನೀವು ಸಾಧಿಸಲು ಬಯಸುವ ದೃಶ್ಯ ಶೈಲಿ (ಶೈಲಿ), ನೀವು ಅಪೇಕ್ಷಿಸುವ ಚಿತ್ರದ ಗುಣಮಟ್ಟದ (ಚಿತ್ರದ ಗುಣಮಟ್ಟ) ಮತ್ತು ದೃಶ್ಯಾನುಪಾತ (ಗಾತ್ರ) ಮುಂತಾದವುಗಳ ಕುರಿತು ಯೋಚಿಸಿ. "2:3 ಆಕಾರ ದೃಶ್ಯಾನುಪಾತದೊಂದಿಗೆ ಆಯಿಲ್ ಪೇಂಟಿಂಗ್ ಶೈಲಿಯಲ್ಲಿ ಬಾಹ್ಯಾಕಾಶದಲ್ಲಿ ಹಾರುತ್ತಿರುವ ಮಸುಕಾದ ಪೋಕಿ ಮುಳ್ಳುಹಂದಿಯ ಒಂದು ಚಿತ್ರವನ್ನು ಜನರೇಟ್ ಮಾಡು" ಎಂಬಂತಹದನ್ನು ಪ್ರಯತ್ನಿಸಿ ನೋಡಿ.
ಸೃಜನಶೀಲತೆ ನಿಮ್ಮ ಫ್ರೆಂಡ್. Gemini ಅತಿವಾಸ್ತವಿಕ ವಸ್ತುಗಳು ಮತ್ತು ಅನನ್ಯ ದೃಶ್ಯಗಳನ್ನು ರಚಿಸುವುದರಲ್ಲಿ ಅದ್ಭುತ ಪರಿಣತಿ ಹೊಂದಿದೆ. ನಿಮ್ಮ ಕಲ್ಪನೆಗೆ ಜೀವ ತುಂಬಿ.
ನೀವು ನೋಡುವುದು ನಿಮಗೆ ಇಷ್ಟವಾಗದಿದ್ದರೆ, ಅದನ್ನು ಬದಲಾಯಿಸಲು Gemini ಅನ್ನು ಕೇಳಿ. ನಮ್ಮ ಇಮೇಜ್ ಎಡಿಟಿಂಗ್ ಮಾಡಲ್ ಮೂಲಕ, ನೀವು ಇಷ್ಟಪಡುವ ವಿವರಗಳನ್ನು ಸಂರಕ್ಷಿಸುವುದರ ಜೊತೆಗೆ, ಹಿನ್ನೆಲೆಯನ್ನು ಬದಲಾಯಿಸಲು, ವಸ್ತುವನ್ನು ಬದಲಾಯಿಸಲು ಅಥವಾ ಅಂಶವನ್ನು ಸೇರಿಸಲು Gemini ಗೆ ಹೇಳುವ ಮೂಲಕ ನೀವು ನಿಮ್ಮ ಚಿತ್ರಗಳ ನಿಯಂತ್ರಣವನ್ನು ತೆಗೆದುಕೊಳ್ಳಬಹುದು.
ನಮ್ಮ AI ತತ್ತ್ವಗಳಿಗೆ ಅನುಗುಣವಾಗಿ, ಈ AI ಇಮೇಜ್ ಜನರೇಟರ್ ಅನ್ನು ಜವಾಬ್ದಾರಿಯುತವಾಗಿ ವಿನ್ಯಾಸಗೊಳಿಸಲಾಗಿದೆ. Gemini ನ ಮೂಲಕ ರಚಿಸಲಾದ ದೃಶ್ಯಗಳು ಮತ್ತು ಮೂಲ ಮಾನವ ಆರ್ಟ್‌ವರ್ಕ್‌ನ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ ಎಂದು ಖಚಿತಪಡಿಸಿಕೊಳ್ಳಲು, Gemini ಅಗೋಚರ SynthID ವಾಟರ್‌ಮಾರ್ಕ್ ಅನ್ನು ಬಳಸುತ್ತದೆ, ಜೊತೆಗೆ ಅವು AI-ಜನರೇಟೆಡ್ ಎಂದು ತೋರಿಸಲು ಗೋಚರಿಸುವ ವಾಟರ್‌ಮಾರ್ಕ್ ಅನ್ನು ಬಳಸುತ್ತದೆ.
Gemini ನ ಔಟ್‌ಪುಟ್‌ಗಳನ್ನು ಪ್ರಾಥಮಿಕವಾಗಿ ಬಳಕೆದಾರರ ಪ್ರಾಂಪ್ಟ್‌ಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಯಾವುದೇ ಜನರೇಟಿವ್ AI ಟೂಲ್‌ನಂತೆ, ಅದು ಕೆಲವು ವ್ಯಕ್ತಿಗಳಿಗೆ ಆಕ್ಷೇಪಾರ್ಹವೆನಿಸುವ ಕಂಟೆಂಟ್ ಅನ್ನು ಜನರೇಟ್ ಮಾಡುವ ನಿದರ್ಶನಗಳು ಎದುರಾಗಬಹುದು. ನಾವು ಥಂಬ್ಸ್ ಅಪ್/ಡೌನ್ ಬಟನ್‌ಗಳ ಮೂಲಕ ನಿಮ್ಮ ಫೀಡ್‌ಬ್ಯಾಕ್ ಅನ್ನು ಆಲಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಿರಂತರ ಸುಧಾರಣೆಗಳನ್ನು ಮಾಡುತ್ತೇವೆ. ಹೆಚ್ಚಿನ ವಿವರಗಳಿಗಾಗಿ, ನೀವು ನಮ್ಮ ವಿಧಾನದ ಕುರಿತು ನಮ್ಮ ವೆಬ್‌ಸೈಟ್‌ನಲ್ಲಿ ಓದಬಹುದು.