Skip to main content

Veo 3 ಮೂಲಕ ಮೌನವನ್ನು ಮುರಿಯಿರಿ

ನಮ್ಮ ಇತ್ತೀಚಿನ AI ವೀಡಿಯೊ ಜನರೇಟರ್ ಆದ Veo 3 ಮೂಲಕ ಉನ್ನತ ಗುಣಮಟ್ಟದ 8-ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ. Google AI Pro ಪ್ಲಾನ್ ಮೂಲಕ ಇದನ್ನು ಬಳಸಿ ನೋಡಿ ಅಥವಾ Ultra ಪ್ಲಾನ್ ಮೂಲಕ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಪಡೆಯಿರಿ. ನಿಮ್ಮ ಮನಸ್ಸಿನಲ್ಲಿ ಇರುವುದನ್ನು ವಿವರಿಸಿ ಮತ್ತು ನಿಮ್ಮ ಆಲೋಚನೆಗಳು ನೇಟಿವ್ ಆಡಿಯೋ ಜನರೇಶನ್ ಮೂಲಕ ಜೀವ ತುಂಬಿಕೊಳ್ಳುವುದನ್ನು ನೋಡಿ.

ಕನಸು ಕಾಣಿ. ಅದನ್ನು ವಿವರಿಸಿ. ಮುಗಿದಿದೆ.

ಎಕ್ಸ್‌ಪ್ಲೋರ್ ಮಾಡಲು

ವೈವಿಧ್ಯಮಯ ಶೈಲಿಗಳೊಂದಿಗೆ ಪ್ರಯೋಗ ಮಾಡಿ, ಆ್ಯನಿಮೇಟೆಡ್ ಪಾತ್ರಗಳಿಗೆ ಜೀವ ತುಂಬಿ ಮತ್ತು ನೀವು ಅಸಾಧ್ಯ ಎಂದುಕೊಂಡಿದ್ದ ವಿಧಗಳಲ್ಲಿ ವಸ್ತುಗಳನ್ನು ಸಂಯೋಜಿಸಿ. ನೀವು ಏನನ್ನು ರಚಿಸಬಹುದು ಎಂಬುದನ್ನು ನೋಡಿ.

ಹಂಚಿಕೊಳ್ಳಲು

ತಮಾಷೆಯ ಮೀಮ್‌ಗಳನ್ನು ರಚಿಸಿ, ಖಾಸಗಿ ಜೋಕ್‌ಗಳನ್ನು ವೀಡಿಯೊಗಳಾಗಿ ಪರಿವರ್ತಿಸಿ, ವಿಶೇಷ ಕ್ಷಣಗಳನ್ನು ಮರು-ಕಲ್ಪಿಸಿಕೊಳ್ಳಿ ಮತ್ತು ಯಾರನ್ನಾದರೂ ನಗಿಸಲು ಸ್ವಂತಿಕೆಯನ್ನು ಸೇರಿಸಿ.

ಬ್ರೈನ್‌ಸ್ಟಾರ್ಮ್ ಮಾಡಲು

ಸೃಜನಶೀಲತೆಗೆ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಿ ಮತ್ತು ನಿಮ್ಮ ಐಡಿಯಾಗಳನ್ನು ಕ್ಷಣಮಾತ್ರದಲ್ಲಿ ವಿಷುವಲೈಜ್ ಮಾಡಿ. ಉತ್ಪನ್ನದ ಪರಿಕಲ್ಪನೆಗಳು ಮತ್ತು ವಿನ್ಯಾಸಗಳಿಂದ ಹಿಡಿದು ಕ್ಷಿಪ್ರವಾದ ಪ್ರೋಟೋಟೈಪಿಂಗ್ ಮತ್ತು ಕಥೆ ಹೇಳುವಿಕೆಯವರೆಗೆ, Gemini ಸಹಾಯ ಮಾಡಬಲ್ಲದು.

ನಮ್ಮ Veo ಮಾಡಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ

Veo 3 Fast

Gemini ಸರಳ ಪಠ್ಯ ಮತ್ತು ಚಿತ್ರಗಳನ್ನು Veo 3 Fast ನಿಂದ ಚಾಲಿತವಾದ ಕಸ್ಟಮ್ ಆಡಿಯೋದೊಂದಿಗೆ ಡೈನಾಮಿಕ್ ವೀಡಿಯೊಗಳಾಗಿ ಪರಿವರ್ತಿಸಬಹುದು.

Google AI Pro ಪ್ಲಾನ್ ಮೂಲಕ
8 ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ
ಉನ್ನತ ಗುಣಮಟ್ಟ, ವೇಗಕ್ಕಾಗಿ ಆಪ್ಟಿಮೈಸ್ ಮಾಡಲಾಗಿದೆ
ಹೊಸತು
ನೇಟಿವ್ ಆಡಿಯೊ ಜನರೇಶನ್
Veo 3

ನಮ್ಮ ಅತ್ಯಾಧುನಿಕ ವೀಡಿಯೊ ಜನರೇಶನ್ ಮಾಡಲ್ ಬಳಸಿಕೊಂಡು ಉನ್ನತ ಗುಣಮಟ್ಟದ, ಧ್ವನಿಯನ್ನು ಹೊಂದಿರುವ 8-ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ.

Google AI Ultra ಪ್ಲಾನ್ ಮೂಲಕ
8 ಸೆಕೆಂಡ್‌ಗಳ ವೀಡಿಯೊಗಳನ್ನು ರಚಿಸಿ
ಅತ್ಯಾಧುನಿಕ ವೀಡಿಯೊ ಗುಣಮಟ್ಟ
ಹೊಸತು
ನೇಟಿವ್ ಆಡಿಯೊ ಜನರೇಶನ್

ಪದೇಪದೇ ಕೇಳಲಾಗುವ ಪ್ರಶ್ನೆಗಳು

ಹೌದು, ನಿಮ್ಮ ಮೊಬೈಲ್ Gemini ಆ್ಯಪ್‌ನಲ್ಲಿ ನೀವು ವೀಡಿಯೊಗಳನ್ನು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು. ವೀಡಿಯೊಗಳನ್ನು ರಚಿಸಲು, ನಿಮ್ಮ ಪ್ರಾಂಪ್ಟ್ ಬಾರ್‌ನಲ್ಲಿರುವ "ವೀಡಿಯೊ" ಬಟನ್ ಅನ್ನು ಟ್ಯಾಪ್ ಮಾಡಿ. ನಿಮಗೆ ಅದು ಕಾಣಿಸದಿದ್ದರೆ, ಹೆಚ್ಚಿನ ಆಯ್ಕೆಗಳನ್ನು ನೋಡಲು ಮೂರು ಚುಕ್ಕೆಗಳಿರುವ ಬಟನ್ ಅನ್ನು ಟ್ಯಾಪ್ ಮಾಡಿ.

Google AI Pro ಪ್ಲಾನ್ ಮೂಲಕ Veo 3 Fast ಅನ್ನು ಬಳಸಿ ನೋಡಿ ಅಥವಾ Google AI Ultra ದಲ್ಲಿ Veo 3 ಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್ ಪಡೆಯಿರಿ, ಇದು 70+ ದೇಶಗಳಲ್ಲಿ ಲಭ್ಯವಿದೆ.

Veo 3 ಮಾಡಲ್‌ಗಳು ಲಭ್ಯವಿಲ್ಲದ ದೇಶಗಳಲ್ಲಿ Veo 2 ಲಭ್ಯವಿದೆ.

AI ವೀಡಿಯೊ ಜನರೇಶನ್ ಅನ್ನು ಸುರಕ್ಷಿತ ಅನುಭವವನ್ನಾಗಿಸಲು ನಾವು ಹಲವಾರು ಪ್ರಮುಖ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದು ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಜನರೇಟ್ ಮಾಡುವುದನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ವ್ಯಾಪಕವಾದ ರೆಡ್ ಟೀಮಿಂಗ್ ಮತ್ತು ಮೌಲ್ಯಮಾಪನವನ್ನು ಒಳಗೊಂಡಿದೆ. ಇದಕ್ಕೆ ಹೆಚ್ಚುವರಿಯಾಗಿ, Gemini ಆ್ಯಪ್‌ನಲ್ಲಿ Veo ಮೂಲಕ ಜನರೇಟ್ ಮಾಡಲಾದ ಎಲ್ಲಾ ವೀಡಿಯೊಗಳನ್ನು ಗೋಚರಿಸುವಂತಹ ವಾಟರ್‌ಮಾರ್ಕ್ ಮತ್ತು SynthID ಯೊಂದಿಗೆ ಗುರುತು ಮಾಡಲಾಗುತ್ತದೆ, ಇದು ಪ್ರತಿ ಫ್ರೇಮ್‌ನಲ್ಲಿ ಎಂಬೆಡ್ ಮಾಡಲಾಗುವ ಡಿಜಿಟಲ್ ವಾಟರ್‌ಮಾರ್ಕ್ ಆಗಿದ್ದು, ವೀಡಿಯೊಗಳು AI-ಜನರೇಟೆಡ್ ಆಗಿವೆ ಎಂಬುದನ್ನು ಸೂಚಿಸುತ್ತದೆ.

Gemini ನ ಔಟ್‌ಪುಟ್‌ಗಳನ್ನು ಪ್ರಾಥಮಿಕವಾಗಿ ಬಳಕೆದಾರರ ಪ್ರಾಂಪ್ಟ್‌ಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಯಾವುದೇ ಜನರೇಟಿವ್ AI ಟೂಲ್‌ನಂತೆ, ಅದು ಕೆಲವು ವ್ಯಕ್ತಿಗಳಿಗೆ ಆಕ್ಷೇಪಾರ್ಹವೆನಿಸುವ ಕಂಟೆಂಟ್ ಅನ್ನು ಜನರೇಟ್ ಮಾಡುವ ನಿದರ್ಶನಗಳು ಎದುರಾಗಬಹುದು. ನಾವು ಥಂಬ್ಸ್ ಅಪ್/ಡೌನ್ ಬಟನ್‌ಗಳ ಮೂಲಕ ನಿಮ್ಮ ಫೀಡ್‌ಬ್ಯಾಕ್ ಅನ್ನು ಆಲಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಿರಂತರ ಸುಧಾರಣೆಗಳನ್ನು ಮಾಡುತ್ತೇವೆ. ಹೆಚ್ಚಿನ ವಿವರಗಳಿಗಾಗಿ, ನೀವು ನಮ್ಮ ವಿಧಾನದ ಕುರಿತು ನಮ್ಮ ವೆಬ್‌ಸೈಟ್‌ನಲ್ಲಿ ಓದಬಹುದು.

ಫಲಿತಾಂಶಗಳು ವಿವರಣಾತ್ಮಕ ಉದ್ದೇಶಗಳಿಗಾಗಿವೆ ಮತ್ತು ಅವು ವ್ಯತ್ಯಾಸಗೊಳ್ಳಬಹುದು. ಕೆಲವು ಫೀಚರ್‌ಗಳಿಗೆ ಇಂಟರ್ನೆಟ್ ಕನೆಕ್ಷನ್ ಮತ್ತು ಸಬ್‌ಸ್ಕ್ರಿಪ್ಶನ್‌ನ ಅಗತ್ಯವಿದೆ. 18+ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ. ಜವಾಬ್ದಾರಿಯುತವಾಗಿ ರಚಿಸಿ.