Gemini ಆ್ಯಪ್‌ಗಾಗಿ ನೀತಿ ಮಾರ್ಗಸೂಚಿಗಳು
ಬಳಕೆದಾರರಿಗೆ ಅತಿಹೆಚ್ಚು ಉಪಯುಕ್ತವಾಗಿರುವುದು, ಅದೇ ವೇಳೆ ನೈಜ-ಜಗತ್ತಿನಲ್ಲಿ ಹಾನಿ ಅಥವಾ ಅಪರಾಧಕ್ಕೆ ಕಾರಣವಾಗಬಲ್ಲ ಔಟ್‌ಪುಟ್‌ಗಳನ್ನು ತಪ್ಪಿಸುವುದು Gemini ಆ್ಯಪ್‌ಗೆ ಸಂಬಂಧಿಸಿದಂತೆ ನಮ್ಮ ಗುರಿಯಾಗಿದೆ. ವಿವಿಧ Google ಉತ್ಪನ್ನಗಳ ಕುರಿತಾದ ಸಂಶೋಧನೆ, ಬಳಕೆದಾರರ ಫೀಡ್‌ಬ್ಯಾಕ್ ಮತ್ತು ತಜ್ಞರ ಸಮಾಲೋಚನೆಯ ಮೂಲಕ ಅನೇಕ ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾದ ಪರಿಣತಿ ಮತ್ತು ಪ್ರಕ್ರಿಯೆಗಳ ಸಹಾಯದಿಂದ, Gemini ಕೆಲವು ಪ್ರಕಾರಗಳ ಸಮಸ್ಯಾತ್ಮಕ ಔಟ್‌ಪುಟ್‌ಗಳನ್ನು ಜನರೇಟ್ ಮಾಡುವುದನ್ನು ತಪ್ಪಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ, ಉದಾಹರಣೆಗೆ:
ಮಕ್ಕಳ ಸುರಕ್ಷತೆಗೆ ಎದುರಾಗುವ ಆಪತ್ತುಗಳು
ಮಕ್ಕಳನ್ನು ಶೋಷಿಸುವ ಅಥವಾ ಅವರನ್ನು ಲೈಂಗಿಕವಾಗಿ ಬಿಂಬಿಸುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್ ಅನ್ನು ಒಳಗೊಂಡ ಔಟ್‌ಪುಟ್‌ಗಳನ್ನು Gemini ಜನರೇಟ್ ಮಾಡಬಾರದು.
ಅಪಾಯಕಾರಿ ಚಟುವಟಿಕೆಗಳು
ನೈಜ-ಜಗತ್ತಿನಲ್ಲಿ ಹಾನಿ ಉಂಟುಮಾಡುವ ಅಪಾಯಕಾರಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಅಥವಾ ಸಾಧ್ಯವಾಗಿಸುವ ಔಟ್‌ಪುಟ್‌ಗಳನ್ನು Gemini ಜನರೇಟ್ ಮಾಡಬಾರದು. ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
-
ಆಹಾರ ಸೇವನೆಯ ಕುರಿತಾದ ಅಸ್ವಸ್ಥತೆಗಳು ಸೇರಿದಂತೆ ಆತ್ಮಹತ್ಯೆ ಮತ್ತು ಇತರ ಸ್ವಯಂ-ಹಾನಿಯ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಚನೆಗಳು.
-
ನೈಜ-ಜಗತ್ತಿನಲ್ಲಿ ಹಾನಿ ಉಂಟುಮಾಡಬಹುದಾದ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ಮಾಡಿಕೊಡುವುದು, ಉದಾಹರಣೆಗೆ, ಕಾನೂನು ಬಾಹಿರ ಡ್ರಗ್‌ಗಳನ್ನು ಖರೀದಿಸುವುದು ಹೇಗೆ ಎಂಬುದರ ಕುರಿತಾದ ಸೂಚನೆಗಳು ಅಥವಾ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಗೈಡ್‌ಗಳು.
ಹಿಂಸಾತ್ಮಕ ಮತ್ತು ರಕ್ತಸಿಕ್ತ
ನೈಜ ಅಥವಾ ಕಾಲ್ಪನಿಕವಾದ, ಉದ್ರೇಕಕಾರಿ, ಆಘಾತಕಾರಿ ಅಥವಾ ಅನಪೇಕ್ಷಿತ ಹಿಂಸಾಚಾರವನ್ನು ವಿವರಿಸುವ ಅಥವಾ ಚಿತ್ರಿಸುವ ಔಟ್‌ಪುಟ್‌ಗಳನ್ನು Gemini ಜನರೇಟ್ ಮಾಡಬಾರದು. ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
-
ಅತಿಯಾದ ರಕ್ತಸಿಕ್ತ ಮತ್ತು ಹಿಂಸಾತ್ಮಕ ಅಥವಾ ಗಾಯಗಳ ಕಂಟೆಂಟ್.
-
ಪ್ರಾಣಿಗಳ ಮೇಲಿನ ಅನಪೇಕ್ಷಿತ ಹಿಂಸಾಚಾರ.
ವಾಸ್ತವಾಂಶಗಳಲ್ಲಿನ ಹಾನಿಕಾರಕ ತಪ್ಪುಗಳು
ಯಾರದಾದರೂ ಆರೋಗ್ಯ, ಸುರಕ್ಷತೆ ಅಥವಾ ಹಣಕಾಸಿಗೆ ಗಮನಾರ್ಹ, ನೈಜ-ಜಗತ್ತಿನ ಹಾನಿ ಉಂಟುಮಾಡಬಲ್ಲ ವಾಸ್ತವಾಂಶಗಳಲ್ಲಿನ ತಪ್ಪುಗಳಿರುವ ಔಟ್‌ಪುಟ್‌ಗಳನ್ನು Gemini ಜನರೇಟ್ ಮಾಡಬಾರದು. ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
-
ಸ್ಥಾಪಿತ ವೈಜ್ಞಾನಿಕ ಅಥವಾ ವೈದ್ಯಕೀಯ ಒಮ್ಮತ ಅಥವಾ ಪುರಾವೆಗಳನ್ನು ಆಧರಿಸಿದ ವೈದ್ಯಕೀಯ ಅಭ್ಯಾಸಗಳಿಗೆ ವ್ಯತಿರಿಕ್ತವಾಗಿರುವ ವೈದ್ಯಕೀಯ ಮಾಹಿತಿ.
-
ಭೌತಿಕ ಸುರಕ್ಷತೆಗೆ ಅಪಾಯ ಒಡ್ಡುವ ತಪ್ಪು ಮಾಹಿತಿ, ಉದಾಹರಣೆಗೆ ತಪ್ಪಾದ ವಿಪತ್ತಿನ ಎಚ್ಚರಿಕೆಗಳು ಅಥವಾ ನಡೆಯುತ್ತಿರುವ ಹಿಂಸಾಚಾರದ ಕುರಿತು ತಪ್ಪಾದ ಸುದ್ದಿ.
ಕಿರುಕುಳ, ಪ್ರಚೋದನೆ ಮತ್ತು ತಾರತಮ್ಯ
ಹಿಂಸಾಚಾರವನ್ನು ಪ್ರಚೋದಿಸುವ, ದುರುದ್ದೇಶಪ್ರೇರಿತ ದಾಳಿಗಳನ್ನು ಮಾಡುವ ಅಥವಾ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧದ ನಿಂದನೆ ಅಥವಾ ಬೆದರಿಕೆಗಳೆಂದು ಪರಿಗಣಿಸಲಾಗುವ ಔಟ್‌ಪುಟ್‌ಗಳನ್ನು Gemini ಜನರೇಟ್ ಮಾಡಬಾರದು. ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
-
ವ್ಯಕ್ತಿಗಳು ಅಥವಾ ಗುಂಪಿನ ಮೇಲೆ ದಾಳಿ ಮಾಡಲು, ಅವರನ್ನು ಗಾಯಗೊಳಿಸಲು ಅಥವಾ ಕೊಲ್ಲಲು ಕರೆ ನೀಡುವುದು.
-
ಕಾನೂನಿನ ರಕ್ಷಣೆ ಒದಗಿಸಲಾಗಿರುವ ಗುಣಲಕ್ಷಣವನ್ನು ಆಧರಿಸಿ ವ್ಯಕ್ತಿಗಳು ಅಥವಾ ಗುಂಪುಗಳ ತೇಜೋವಧೆ ಮಾಡುವ ಅಥವಾ ಅವರ ವಿಚಾರದಲ್ಲಿ ತಾರತಮ್ಯ ಮಾಡುವುದನ್ನು ಪ್ರತಿಪಾದಿಸುವ ಹೇಳಿಕೆಗಳು.
-
ಸಂರಕ್ಷಿತ ಗುಂಪುಗಳು ಮನುಷ್ಯರಿಗಿಂತ ಕಡಿಮೆ ಅಥವಾ ಕೀಳೆಂದು ಸೂಚಿಸುವ ಹೇಳಿಕೆಗಳು, ಉದಾಹರಣೆಗೆ ದುರುದ್ದೇಶಪ್ರೇರಿತವಾಗಿ ಅವರನ್ನು ಪ್ರಾಣಿಗಳಿಗೆ ಹೋಲಿಸುವುದು ಅಥವಾ ಅವರು ಮೂಲಭೂತವಾಗಿ ದುಷ್ಟರು ಎಂದು ಸೂಚಿಸುವುದು.
ಲೈಂಗಿಕ ಅಶ್ಲೀಲತೆಯ ವಿಷಯವಸ್ತು
ಅಶ್ಲೀಲ ಅಥವಾ ಗ್ರಾಫಿಕ್ ಲೈಂಗಿಕ ಕ್ರಿಯೆಗಳು ಅಥವಾ ಲೈಂಗಿಕ ಹಿಂಸಾಚಾರ ಅಥವಾ ದೇಹದ ಲೈಂಗಿಕ ಭಾಗಗಳನ್ನು ಅಶ್ಲೀಲ ರೀತಿಯಲ್ಲಿ ವಿವರಿಸುವ ಅಥವಾ ಚಿತ್ರಿಸುವ ಔಟ್‌ಪುಟ್‌ಗಳನ್ನು Gemini ರಚಿಸಬಾರದು. ಇವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
-
ಪೋರ್ನೊಗ್ರಾಫಿ ಅಥವಾ ಕಾಮಪ್ರಚೋದಕ ಕಂಟೆಂಟ್.
-
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ಕಿರುಕುಳದ ಚಿತ್ರಣಗಳು.
ಖಂಡಿತವಾಗಿಯೂ ಸಾಂದರ್ಭಿಕತೆ ಮುಖ್ಯವಾಗುತ್ತದೆ. ಔಟ್‌ಪುಟ್‌ಗಳನ್ನು ಮೌಲ್ಯಮಾಪನ ಮಾಡುವಾಗ, ಶೈಕ್ಷಣಿಕ, ಡಾಕ್ಯುಮೆಂಟರಿ, ಕಲಾತ್ಮಕ ಅಥವಾ ವೈಜ್ಞಾನಿಕ ಉಪಯೋಗಗಳು ಸೇರಿದಂತೆ, ಹಲವಾರು ಅಂಶಗಳನ್ನು ನಾವು ಪರಿಗಣಿಸುತ್ತೇವೆ.
ಈ ಮಾರ್ಗಸೂಚಿಗಳನ್ನು Gemini ಪಾಲಿಸುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಷ್ಟಕರ: ಬಳಕೆದಾರರು Gemini ಜೊತೆಗೆ ಅಪರಿಮಿತ ವಿಧಗಳಲ್ಲಿ ತೊಡಗಿಸಿಕೊಳ್ಳಬಹುದು ಮತ್ತು Gemini ಕೂಡ ಅಷ್ಟೇ ಅಪರಿಮಿತ ವಿಧಗಳಲ್ಲಿ ಅವರಿಗೆ ಪ್ರತಿಕ್ರಿಯಿಸಬಲ್ಲದು. ಹೀಗಾಗುವುದಕ್ಕೆ LLM ಗಳು ಸಂಭವನೀಯವಾಗಿರುವುದೇ ಕಾರಣ, ಎಂದರೆ ಅವು ಯಾವಾಗಲೂ ಬಳಕೆದಾರರ ಇನ್‌ಪುಟ್‌ಗಳಿಗೆ ತಕ್ಕಂತೆ ಹೊಸ ಮತ್ತು ವಿಭಿನ್ನ ಪ್ರತಿಕ್ರಿಯೆಗಳನ್ನು ರೂಪಿಸುತ್ತಿರುತ್ತವೆ. ಹಾಗೂ Gemini ನ ಫಲಿತಾಂಶಗಳು ಅದರ ಟ್ರೈನಿಂಗ್ ಡೇಟಾದಿಂದ ಮಾಹಿತಿ ಪಡೆಯುತ್ತವೆ, ಇದರರ್ಥ ಕೆಲವೊಮ್ಮೆ Gemini ಆ ಡೇಟಾದ ಮಿತಿಗಳನ್ನು ಪ್ರತಿಬಿಂಬಿಸುತ್ತದೆ. ಇವು ದೊಡ್ಡ ಲ್ಯಾಂಗ್ವೇಜ್ ಮಾಡಲ್‌ಗಳಿಗೆ ಸಂಬಂಧಿಸಿದ ಚಿರಪರಿಚಿತ ಸಮಸ್ಯೆಗಳಾಗಿವೆ ಹಾಗೂ ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತಿದ್ದರೂ ಸಹ, Gemini ಕೆಲವೊಮ್ಮೆ ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವ, ಸೀಮಿತ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವ ಅಥವಾ ಅತಿಯಾದ ಸಾಮಾನ್ಯೀಕರಣಗಳನ್ನು ಒಳಗೊಂಡಿರುವ ಕಂಟೆಂಟ್ ಅನ್ನು ರಚಿಸಬಹುದು, ವಿಶೇಷವಾಗಿ ಸವಾಲಿನ ಪ್ರಾಂಪ್ಟ್‌ಗಳಿಗೆ ಪ್ರತಿಕ್ರಿಯೆ ನೀಡುವಾಗ ಹೀಗಾಗಬಹುದು. ನಾವು ವಿವಿಧ ವಿಧಾನಗಳ ಮೂಲಕ ಬಳಕೆದಾರರಿಗಾಗಿ ಈ ಮಿತಿಗಳನ್ನು ಹೈಲೈಟ್ ಮಾಡುತ್ತೇವೆ, ಫೀಡ್‌ಬ್ಯಾಕ್ ಒದಗಿಸಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ ಮತ್ತು ನಮ್ಮ ನೀತಿಗಳು ಹಾಗೂ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ, ಅನುಕೂಲಕರವಾದ, ಕಂಟೆಂಟ್ ಅನ್ನು ತೆಗೆದುಹಾಕಲು ವರದಿ ಮಾಡುವ ಟೂಲ್‌ಗಳನ್ನು ನೀಡುತ್ತೇವೆ. ಅಲ್ಲದೇ ಬಳಕೆದಾರರು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಮತ್ತು ನಮ್ಮ ನಿಷೇಧಿತ ಬಳಕೆಯ ನೀತಿಯನ್ನು ಪಾಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.
ಜನರು Gemini ಆ್ಯಪ್ ಅನ್ನು ಹೇಗೆ ಬಳಸುತ್ತಾರೆ ಮತ್ತು ಅದು ಅವರಿಗೆ ಯಾವ ರೀತಿ ಅತಿಹೆಚ್ಚು ಉಪಯುಕ್ತವಾಗಬಲ್ಲದು ಎಂಬುದನ್ನು ನಾವು ತಿಳಿಯುತ್ತಾ ಹೋದಂತೆ, ನಾವು ಈ ಮಾರ್ಗಸೂಚಿಗಳನ್ನು ಅಪ್‌ಡೇಟ್ ಮಾಡುತ್ತೇವೆ. Gemini ಆ್ಯಪ್ ಅನ್ನು ರೂಪಿಸಲು ನಾವು ಅನುಸರಿಸುವ ವಿಧಾನದ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.