Skip to main content

Gemini Deep Research

Save hours of work with Deep Research as your personal research assistant. Now with the ability to draw context from your Gmail, Drive and even Chat in addition to the web, and transform reports into interactive content in Canvas.

Deep Research ಎಂದರೇನು?

Get up to speed on just about anything with Deep Research, an agentic feature in Gemini that can automatically browse up to hundreds of websites and even your Gmail, Drive and Chat on your behalf, think through its findings, and create insightful multi-page reports in minutes.

Gemini 2.5 ಮಾಡಲ್‌ನೊಂದಿಗೆ, ಪ್ಲಾನಿಂಗ್‌ನಿಂದ ಆರಂಭಿಸಿ ಹೆಚ್ಚು ಉಪಯುಕ್ತ ಒಳನೋಟಗಳುಳ್ಳ ಮತ್ತು ವಿವರವಾದ ವರದಿಗಳನ್ನು ರಚಿಸಿಕೊಡುವವರೆಗೆ, ಸಂಶೋಧನೆಯ ಎಲ್ಲಾ ಹಂತಗಳಲ್ಲೂ Deep Research ಇನ್ನಷ್ಟು ಉತ್ತಮವಾಗಿದೆ.

ಪ್ಲಾನಿಂಗ್

Deep Research ನಿಮ್ಮ ಪ್ರಾಂಪ್ಟ್ ಅನ್ನು ವೈಯಕ್ತಿಕಗೊಳಿಸಿದ ಬಹು-ಪಾಯಿಂಟ್ ಸಂಶೋಧನಾ ಪ್ಲಾನ್ ಆಗಿ ಪರಿವರ್ತಿಸುತ್ತದೆ

ಹುಡುಕಲಾಗುತ್ತಿದೆ

Deep Research autonomously searches and deeply browses the web and your Gmail, Drive, and Chat if you choose so, to find relevant, up-to-date information

ರೀಸನಿಂಗ್

Deep Research ಮಾಹಿತಿಗಳನ್ನು ಒಂದೊಂದಾಗಿ ಸಂಗ್ರಹಿಸಿ, ಅವುಗಳ ಬಗ್ಗೆ ಆಳವಾಗಿ ಯೋಚಿಸಿ, ಮುಂದುವರೆಯುವ ಮೊದಲು ತನ್ನ ಆಲೋಚನೆಗಳನ್ನು ತೋರಿಸುತ್ತದೆ.

ವರದಿ ಮಾಡುತ್ತಿದೆ

Deep Research ನಿಮಗೆ ಬೇಕಾದ ವಿಷಯದ ಬಗ್ಗೆ, ಹೆಚ್ಚಿನ ವಿವರ ಮತ್ತು ಒಳನೋಟಗಳನ್ನು ಹೊಂದಿರುವ ಸಮಗ್ರ ಕಸ್ಟಮ್ ರಿಸರ್ಚ್ ವರದಿಗಳನ್ನು ನಿಮಿಷಗಳಲ್ಲಿಯೇ ಸಿದ್ಧಪಡಿಸುತ್ತದೆ. ಇದು ಆಡಿಯೋ ಓವರ್‌ವ್ಯೂ ರೂಪದಲ್ಲಿ ಸಹ ಲಭ್ಯವಿರುತ್ತದೆ. ಇದರಿಂದ ನಿಮ್ಮ ಗಂಟೆಗಳಷ್ಟು ಸಮಯ ಸೇವ್ ಆಗುತ್ತದೆ

Deep Research ಅನ್ನು ಬಳಸುವುದು ಹೇಗೆ

Gemini Deep Research ನಿಮ್ಮ ಸಂಕೀರ್ಣ ಸಂಶೋಧನಾ ಕಾರ್ಯಗಳನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾಗಿದೆ, ಇದನ್ನು ಮಾಡಲು ಇದು ವಿವಿಧ ಹಂತಗಳಲ್ಲಿ ನಿಮ್ಮ ಕಾರ್ಯವನ್ನು ಮೌಲ್ಯಮಾಪನ ಮಾಡುತ್ತದೆ, ವೆಬ್‌ನಾದ್ಯಂತದ ಮೂಲಗಳನ್ನು ಎಕ್ಸ್‌ಪ್ಲೋರ್ ಮಾಡುತ್ತದೆ ಮತ್ತು ನೀವು ಆಯ್ಕೆಮಾಡಿದರೆ ನಿಮ್ಮ Workspace ಕಂಟೆಂಟ್ ಅನ್ನು ಎಕ್ಸ್‌ಪ್ಲೋರ್ ಮಾಡುತ್ತದೆ, ಉತ್ತರಗಳನ್ನು ಹುಡುಕುತ್ತದೆ ಮತ್ತು ಸಮಗ್ರವಾದ ಫಲಿತಾಂಶಗಳನ್ನು ಒದಗಿಸಲು ಹೆಚ್ಚಿನ ಮಾಹಿತಿಯನ್ನು ವಿಶ್ಲೇಷಿಸುತ್ತದೆ.

ನೀವು Deep Research ಗೆ ನಿಮ್ಮದೇ ಫೈಲ್‌ಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು Canvas ನಲ್ಲಿ ಅವುಗಳನ್ನು ಸಂವಹನಾತ್ಮಕ ಕಂಟೆಂಟ್, ಕ್ವಿಜ್‌ಗಳು, ಆಡಿಯೋ ಓವರ್‌ವ್ಯೂಗಳು ಮತ್ತು ಇತ್ಯಾದಿಗಳಿಗೆ ಪರಿವರ್ತಿಸುವ ಮೂಲಕ ನಿಮ್ಮ ವರದಿಗಳನ್ನು ಹೆಚ್ಚು ಆಕರ್ಷಕಗೊಳಿಸಬಹುದು.

ಸ್ಪರ್ಧಾತ್ಮಕ ವಿಶ್ಲೇಷಣೆ

ನಿಮ್ಮ ಆಂತರಿಕ ಸ್ಟ್ರ್ಯಾಟಜಿ ಮೆಮೊಗಳು, ಫೀಚರ್-ಹೋಲಿಕೆ ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರತಿಸ್ಪರ್ಧಿ ಉತ್ಪನ್ನದ ಕುರಿತಾದ ತಂಡದ ಜೊತೆಗೆ ನಡೆಸಿದ ಚಾಟ್‌ಗಳೊಂದಿಗೆ ಸಾರ್ವಜನಿಕ ವೆಬ್ ಡೇಟಾವನ್ನು ಕ್ರಾಸ್-ರೆಫರೆನ್ಸ್ ಮಾಡುವ ಮೂಲಕ ಸ್ಪರ್ಧಾತ್ಮಕ ವರದಿಯನ್ನು ರಚಿಸಿ.

ಸೂಕ್ತ ಪರಿಶ್ರಮ

ಸಂಭಾವ್ಯ ಸೇಲ್ಸ್ ಲೀಡ್, ಕಂಪನಿಯ ಉತ್ಪನ್ನಗಳನ್ನು ವಿಶ್ಲೇಷಿಸುವುದು, ಫಂಡಿಂಗ್ ಇತಿಹಾಸ, ತಂಡದ ಮತ್ತು ಸ್ಪರ್ಧಾತ್ಮಕ ವಾತಾವರಣವನ್ನು ತನಿಖೆ ಮಾಡುವುದು ಮತ್ತು ಕ್ಲೈಂಟ್ ಸಂಬಂಧದ ಕುರಿತು Workspace ನಲ್ಲಿ ನಿಮ್ಮ ಸ್ವಂತ ಟಿಪ್ಪಣಿಗಳೊಂದಿಗೆ ಅದನ್ನು ವಿಲೀನಗೊಳಿಸುವುದು.

ವಿಷಯದ ಗ್ರಹಿಕೆ

ಪ್ರಮುಖ ಪರಿಕಲ್ಪನೆಗಳಲ್ಲಿನ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಗುರುತಿಸುವ ಮೂಲಕ, ಐಡಿಯಾಗಳ ನಡುವಿನ ಸಂಬಂಧಗಳನ್ನು ಪತ್ತೆಹಚ್ಚುವ ಮೂಲಕ ಮತ್ತು ಮೂಲ ತತ್ವಗಳನ್ನು ವಿವರಿಸುವ ಮೂಲಕ ವಿಷಯದ ಸಂಪೂರ್ಣ ತಿಳುವಳಿಕೆಯನ್ನು ಪಡೆಯಿರಿ.

ಉತ್ಪನ್ನದ ಹೋಲಿಕೆ

ಫೀಚರ್‌ಗಳು, ಪರ್ಫಾರ್ಮೆನ್ಸ್, ಬೆಲೆ ಮತ್ತು ಗ್ರಾಹಕರ ವಿಮರ್ಶೆಗಳ ಆಧಾರದ ಮೇಲೆ ಉಪಕರಣದ ವಿವಿಧ ಮಾಡಲ್‌ಗಳನ್ನು ಮೌಲ್ಯಮಾಪನ ಮಾಡುವುದು.

ಸರಳವಾದ ಪ್ರಶ್ನೆ-ಉತ್ತರ ಪ್ರಕ್ರಿಯೆಯನ್ನು ಮೀರಿ, ಆಳವಾಗಿ ಯೋಚಿಸಿ ಮಾಡುವುದು ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ, ನಿಜವಾದ ಕೊಲಾಬೊರೇಟಿವ್ ಪಾರ್ಟ್‌ನರ್ ಆಗಲು ಸಾಧ್ಯವಾಗುವ ಹಾಗೆ ಹೆಚ್ಚು ಏಜೆಂಟಿಕ್ AI ಆಗಿ ಮಾಡುವ ಕ್ರಿಯೆಯಲ್ಲಿ ಇಟ್ಟಿರುವ ಒಂದು ಹೆಜ್ಜೆಯಾಗಿದೆ.

ಇಂದೇ ಬಳಸಿ ನೋಡಿ/a> ಅದು ಸಹ ಯಾವುದೇ ವೆಚ್ಚವಿಲ್ಲದೆ.

ಏಜೆಂಟಿಕ್ ಸಿಸ್ಟಂ

Deep Research ಅನ್ನು ಬಿಲ್ಡ್ ಮಾಡಲು, ನಾವು Gemini ಆ್ಯಪ್ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಅನುವು ಮಾಡಿಕೊಡುವ ಹೊಸ ಪ್ಲಾನಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದ್ದೇವೆ. Deep Research ಗಾಗಿ, ನಾವು Gemini ಮಾಡೆಲ್‌ಗಳಿಗೆ ಸಮರ್ಥವಾಗಿ ತರಬೇತಿ ನೀಡಿದ್ದೇವೆ:

  • ಸಮಸ್ಯೆಯನ್ನು ವಿಂಗಡಣೆ ಮಾಡುವುದು: ಯಾರಾದರೂ ಒಂದು ಸಂಕೀರ್ಣವಾದ ಬಳಕೆದಾರರ ಪ್ರಶ್ನೆಯನ್ನು ಕೇಳಿದರೆ, ಸಿಸ್ಟಂ ಮೊದಲು ಆ ಪ್ರಶ್ನೆಯ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಲು ಒಂದು ರಿಸರ್ಚ್ ಪ್ಲಾನ್ ಅನ್ನು ರೂಪಿಸುತ್ತದೆ. ನಂತರ, ಆ ಪ್ರಶ್ನೆಯನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ, ಉಪ-ಕಾರ್ಯಗಳಾಗಿ ವಿಂಗಡಿಸಿಕೊಂಡು ಅದನ್ನು ಪರಿಹರಿಸುತ್ತದೆ. ಪ್ಲಾನ್‌ನ ನಿಯಂತ್ರಣ ನಿಮ್ಮ ಕೈಯಲ್ಲಿಯೇ ಇದೆ: Gemini ಅದನ್ನು ನಿಮಗೆ ತೋರಿಸುತ್ತದೆ, ಮತ್ತು ಅದು ಸರಿಯಾದ ವಿಷಯಗಳ ಕಡೆಗೆ ಗಮನಹರಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಅದನ್ನು ರೀಫೈನ್ ಮಾಡಬಹುದು.

  • ಸಂಶೋಧನೆ: ಮಾಡೆಲ್ ಈ ಪ್ಲಾನ್ ಅನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಯಾವ ಉಪ-ಕಾರ್ಯಗಳನ್ನು ಏಕಕಾಲದಲ್ಲಿ ನಿಭಾಯಿಸಬಹುದು ಮತ್ತು ಯಾವುದನ್ನು ಅನುಕ್ರಮವಾಗಿ ಮಾಡಬೇಕೆಂದು ಬುದ್ಧಿವಂತಿಕೆಯಿಂದ ನಿರ್ಧರಿಸುತ್ತದೆ. ಈ ಮಾಡೆಲ್ ಮಾಹಿತಿ ಪಡೆಯಲು ಮತ್ತು ಅದರ ಬಗ್ಗೆ ಆಲೋಚಿಸಲು ಹುಡುಕಾಟ ಮತ್ತು ವೆಬ್ ಬ್ರೌಸಿಂಗ್‌ನಂತಹ ಟೂಲ್‌ಗಳನ್ನು ಬಳಸಬಹುದು. ಈ ಮಾಡೆಲ್, ಪ್ರತಿ ಹಂತದಲ್ಲೂ ಲಭ್ಯವಿರುವ ಮಾಹಿತಿಯ ಬಗ್ಗೆ ಆಲೋಚಿಸಿ ತನ್ನ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ ಮಾಡೆಲ್ ಇಲ್ಲಿಯವರೆಗೆ ಏನು ಕಲಿತಿದೆ ಮತ್ತು ಮುಂದೆ ಏನು ಮಾಡಲು ಉದ್ದೇಶಿಸಿದೆ ಎಂಬುದನ್ನು ಬಳಕೆದಾರರು ಅನುಸರಿಸಲು ನಾವು ಒಂದು ಆಲೋಚನಾ ಪ್ಯಾನೆಲ್ ಅನ್ನು ಪರಿಚಯಿಸಿದ್ದೇವೆ.

  • ಸಂಯೋಜನೆ: ಮಾಡೆಲ್ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ನಿರ್ಧರಿಸಿದ ನಂತರ, ಅದು ಸಂಶೋಧನೆಗಳನ್ನು ಸಮಗ್ರ ವರದಿಯಾಗಿ ಸಂಯೋಜಿಸುತ್ತದೆ ವರದಿಯನ್ನು ರಚಿಸುವಾಗ, Gemini ಮಾಹಿತಿಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುತ್ತದೆ, ಪ್ರಮುಖ ವಿಷಯಗಳು ಮತ್ತು ಅಸಮಂಜಸತೆಗಳನ್ನು ಗುರುತಿಸುತ್ತದೆ ಮತ್ತು ಸ್ಪಷ್ಟತೆ ಮತ್ತು ವಿವರಗಳನ್ನು ಹೆಚ್ಚಿಸಲು ಸ್ವಯಂ-ವಿಮರ್ಶೆಯ ಹಲವು ಹಂತಗಳನ್ನು ನಿರ್ವಹಿಸುವ ಮೂಲಕ ವರದಿಯನ್ನು ಅರ್ಥವಾಗುವಂತೆ ಮತ್ತು ಉಪಯುಕ್ತವಾಗುವ ರೀತಿಯಲ್ಲಿ ರಚಿಸುತ್ತದೆ.

ಹೊಸ ವರ್ಗ, ಹೊಸ ಸಮಸ್ಯೆಗಳು, ಹೊಸ ಪರಿಹಾರಗಳು

Deep Research ಅನ್ನು ನಿರ್ಮಿಸುವಾಗ, ನಾವು ಮೂರು ಪ್ರಮುಖ ತಾಂತ್ರಿಕ ಸವಾಲುಗಳನ್ನು ಎದುರಿಸಬೇಕಾಯಿತು

ಬಹು-ಹಂತದ ಯೋಜನೆ

ಸಂಶೋಧನಾ ಕಾರ್ಯಗಳಿಗೆ ಪುನರಾವರ್ತಿತ ಯೋಜನೆಯ ಹಲವು ಹಂತಗಳ ಅಗತ್ಯವಿದೆ. ಪ್ರತಿ ಹಂತದಲ್ಲೂ, ಮಾಡೆಲ್ ಇಲ್ಲಿಯವರೆಗೆ ಸಂಗ್ರಹಿಸಿದ ಎಲ್ಲಾ ಮಾಹಿತಿಯ ಮೇಲೆ ತನ್ನನ್ನು ತಾನೇ ಆಧಾರವಾಗಿಟ್ಟುಕೊಳ್ಳಬೇಕು, ನಂತರ ಕಾಣೆಯಾದ ಮಾಹಿತಿ ಮತ್ತು ಅದು ಎಕ್ಸ್‌ಪ್ಲೋರ್ ಮಾಡಲು ಬಯಸುವ ವ್ಯತ್ಯಾಸಗಳನ್ನು ಗುರುತಿಸಬೇಕು, ಇದು ಸಮಗ್ರತೆಯನ್ನು ಲೆಕ್ಕಾಚಾರ ಮತ್ತು ಬಳಕೆದಾರರ ಕಾಯುವ ಸಮಯದೊಂದಿಗೆ ವಿನಿಮಯ ಮಾಡಿಕೊಳ್ಳುತ್ತದೆ. ಡೇಟಾವು ಸಮರ್ಥ ರೀತಿಯಲ್ಲಿ ದೀರ್ಘ ಬಹು-ಹಂತದ ಪ್ಲಾನಿಂಗ್‌‌ನಲ್ಲಿ ಪರಿಣಾಮಕಾರಿಯಾಗಲು ಮಾಡೆಲ್‌‌ಗೆ ತರಬೇತಿ ನೀಡುವುದರಿಂದ ಎಲ್ಲಾ ವಿಷಯಗಳಾದ್ಯಂತ ತೆರೆದ ಡೊಮೇನ್ ಸೆಟ್ಟಿಂಗ್‌ನಲ್ಲಿ Deep Research ಕಾರ್ಯವನ್ನು ಮಾಡಲು ನಮಗೆ ಅನುವು ಮಾಡಿಕೊಡುತ್ತದೆ.

ದೀರ್ಘಾವಧಿಯ ತೀರ್ಮಾನ

ಒಂದು ವಿಶಿಷ್ಟವಾದ Deep Research ಕಾರ್ಯವು ಹಲವಾರು ನಿಮಿಷಗಳ ಕಾಲ ಹಲವು ಮಾಡೆಲ್ ಕರೆಗಳನ್ನು ಒಳಗೊಂಡಿರುತ್ತದೆ. ಇದು ಬಿಲ್ಡಿಂಗ್ ಏಜೆಂಟ್‌ಗಳಿಗೆ ಸವಾಲನ್ನು ಉಂಟುಮಾಡುತ್ತದೆ: ಏಜೆಂಟ್‌ನಲ್ಲಿ ಒಂದು ಸಣ್ಣ ತಪ್ಪು ಸಂಭವಿಸಿದರೂ, ಕೆಲಸವನ್ನು ಮೊದಲಿನಿಂದ ಮರು ಪ್ರಾರಂಭ ಮಾಡಬೇಕಾಗಿಲ್ಲ ಎಂಬಂತೆ ಅದನ್ನು ತಯಾರಿಸಬೇಕು

ಇದನ್ನು ಪರಿಹರಿಸಲು, ನಾವು ಒಂದು ಹೊಸ ಅಸಮಕಾಲಿಕ ಟಾಸ್ಕ್‌ ಮ್ಯಾನೇಜರ್‌ ಅನ್ನು ಅಭಿವೃದ್ಧಿಪಡಿಸಿದ್ದೇವೆ, ಅದು ಪ್ಲಾನರ್ ಮತ್ತು ಕಾರ್ಯ ಮಾದರಿಗಳ ನಡುವೆ ಹಂಚಿಕೆಯ ಸ್ಥಿತಿಯನ್ನು ನಿರ್ವಹಿಸುತ್ತದೆ, ಇದು ಸಂಪೂರ್ಣ ಕಾರ್ಯವನ್ನು ಮರುಪ್ರಾರಂಭಿಸದೆ ಸುಲಭವಾಗಿ ದೋಷ ನಿವಾರಣೆಗೆ ಅವಕಾಶ ನೀಡುತ್ತದೆ. ಈ ಸಿಸ್ಟಂ ಅಸಮಕಾಲಿಕವಾಗಿದೆ: ನೀವು Deep Research ಯೋಜನೆಯನ್ನು ಪ್ರಾರಂಭಿಸಿದ ನಂತರ ಬೇರೆ ಹೋಗಬಹುದು ಅಥವಾ ನಿಮ್ಮ ಕಂಪ್ಯೂಟರ್ ಅನ್ನು ಆಫ್ ಮಾಡಬಹುದು ಮತ್ತು ಮುಂದಿನ ಬಾರಿ ನೀವು Gemini ಗೆ ಭೇಟಿ ನೀಡಿದಾಗ, ನಿಮ್ಮ ಸಂಶೋಧನೆ ಪೂರ್ಣಗೊಂಡಾಗ ನಿಮಗೆ ಸೂಚನೆ ಸಿಗುತ್ತದೆ.

ಸಂದರ್ಭ ನಿರ್ವಹಣೆ

ಸಂಶೋಧನಾ ಅವಧಿಯಲ್ಲಿ, ಸೆಶನ್ ನೂರಾರು ಪುಟಗಳ ವಿಷಯವನ್ನು ಪ್ರಕ್ರಿಯೆಗೊಳಿಸಬಹುದು. ನಿರಂತರತೆಯನ್ನು ಕಾಪಾಡಿಕೊಳ್ಳಲು ಮತ್ತು ಅನುಸರಣಾ ಪ್ರಶ್ನೆಗಳನ್ನು ಸಕ್ರಿಯಗೊಳಿಸಲು, ನಾವು Gemini ಯ ಉದ್ಯಮ-ಪ್ರಮುಖ 1 ಮಿಲಿಯನ್ ಟೋಕನ್ ಕಾಂಟೆಕ್ಸ್ಟ್ ವಿಂಡೋವನ್ನು RAG ಸೆಟಪ್‌ ಮೂಲಕ ಪೂರಕವಾಗಿ ಬಳಸುತ್ತೇವೆ. ಇದು ಆ ಚಾಟ್ ಸೆಷನ್‌ನಲ್ಲಿ ಕಲಿತ ಎಲ್ಲವನ್ನೂ "ನೆನಪಿಟ್ಟುಕೊಳ್ಳಲು" ಸಿಸ್ಟಂಗೆ ಪರಿಣಾಮಕಾರಿಯಾಗಿ ಅನುವು ಮಾಡಿಕೊಡುತ್ತದೆ, ನೀವು ಅದರೊಂದಿಗೆ ಹೆಚ್ಚು ಸಂವಹನ ನಡೆಸಿದಂತೆ ಅದು ಹೆಚ್ಚು ಬುದ್ದಿವಂತಿಕೆಯಿಂದ ಕೆಲಸ ಮಾಡುತ್ತದೆ.

ಹೊಸ ಮಾಡಲ್‌ಗಳೊಂದಿಗೆ ವಿಕಸನ ಹೊಂದುವುದು

Deep Research ಅನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಿದಾಗ ಅದು Gemini1.5 Pro ನಿಂದ ಚಾಲಿತವಾಗಿತ್ತು. Gemini 2.0 Flash Thinking (ಪ್ರಾಯೋಗಿಕ) ಪರಿಚಯ ಮಾಡುವ ಮೂಲಕ ನಾವು ಈ ಉತ್ಪನ್ನದ ಗುಣಮಟ್ಟ ಮತ್ತು ಸೇವೆಯ ದಕ್ಷತೆಯನ್ನು ಬಹಳಷ್ಟು ಸುಧಾರಿಸಲು ಸಾಧ್ಯವಾಯಿತು. ಆಲೋಚನಾ ಮಾಡೆಲ್‌ಗಳನ್ನು ಬಳಸುವುದರಿಂದ, Gemini ಮುಂದಿನ ಹಂತಗಳಿಗೆ ಹೋಗುವ ಮೊದಲು ಏನು ಮಾಡಬೇಕೆಂದು ಹೆಚ್ಚು ಸಮಯ ತೆಗೆದುಕೊಂಡು ಪ್ಲಾನ್ ಮಾಡುತ್ತದೆ. ಸ್ವಯಂ-ಚಿಂತನೆ ಮತ್ತು ಪ್ಲಾನಿಂಗ್‌ನ ಈ ಸಹಜ ಗುಣಲಕ್ಷಣವು ಈ ರೀತಿಯ ದೀರ್ಘಾವಧಿಯ ಏಜೆಂಟಿಕ್ ಕಾರ್ಯಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಈಗ Gemini ಸಂಶೋಧನೆಯ ಎಲ್ಲಾ ಹಂತಗಳಲ್ಲೂ ಹಿಂದೆಗಿಂತ ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ಹೆಚ್ಚು ವಿವರವಾದ ವರದಿಗಳನ್ನು ಕೊಡುತ್ತದೆ ಎಂಬುದನ್ನು ನಾವು ಗಮನಿಸಿದ್ದೇವೆ ಅದೇ ಸಮಯದಲ್ಲಿ, Flash ಮಾಡೆಲ್‌ ಕಂಪ್ಯೂಟರ್‌ನ ದಕ್ಷತೆಯಿಂದ, Deep Research ಗೆ ಹೆಚ್ಚಿನ ಬಳಕೆದಾರರಿಗೆ ಆ್ಯಕ್ಸೆಸ್ ಅನ್ನು ವಿಸ್ತರಿಸಲು ನಮಗೆ ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ Flash ಮತ್ತು ಆಲೋಚನಾ ಮಾಡೆಲ್‌ಗಳ ಮೇಲೆ ಅಭಿವೃದ್ಧಿಪಡಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು Deep Research ಇನ್ನಷ್ಟು ಉತ್ತಮಗೊಳ್ಳುತ್ತಲೇ ಇರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಮತ್ತು ನಮ್ಮ ಅತ್ಯಂತ ಸಮರ್ಥ ಮಾಡಲ್ ಆಗಿರುವ Gemini 2.5 ಜೊತೆಗೆ, ಹೆಚ್ಚು ಉಪಯುಕ್ತವಾದ ಒಳನೋಟಗಳುಳ್ಳ ಮತ್ತು ವಿವರವಾದ ವರದಿಗಳನ್ನು ರಚಿಸಿಕೊಡುವ ಮೂಲಕ ಸಂಶೋಧನೆಯ ಎಲ್ಲಾ ಹಂತಗಳಲ್ಲೂ Deep Research ಇನ್ನಷ್ಟು ಉತ್ತಮವಾಗಿದೆ

ಮುಂದೇನು

ನಾವು ಸಿಸ್ಟಂ ಅನ್ನು ಬಹುಮುಖವಾಗಿರುವಂತೆ ನಿರ್ಮಿಸಿದ್ದೇವೆ, ಇದರಿಂದ ಕಾಲಾನಂತರದಲ್ಲಿ ಅದು ಬ್ರೌಸ್ ಮಾಡಬಹುದಾದ ವಿಷಯಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವನ್ನು ನೀಡುವುದರ ಮೂಲಕ ಮತ್ತು ಮುಕ್ತ ಅಂತರ್ಜಾಲದ ಹೊರತಾಗಿಯೂ ಬೇರೆ ಮೂಲಗಳಿಂದಲೂ ಮಾಹಿತಿಯನ್ನು ಪಡೆಯಬಹುದು

ಜನರು Deep Research ಅನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಮತ್ತು ಈ ನೈಜ-ಪ್ರಪಂಚದ ಅನುಭವಗಳು ನಾವು Deep Research ಅನ್ನು ಹೇಗೆ ಬಿಲ್ಡ್ ಮಾಡುತ್ತದೆ ಮತ್ತು ಸುಧಾರಿಸಲು ಮುಂದುವರಿಯುತ್ತೇವೆ ಎಂಬುದನ್ನು ತಿಳಿಸುತ್ತದೆ. ಅಂತಿಮವಾಗಿ, ನಮ್ಮ ಗುರಿಯು ನಿಜವಾದ ಏಜೆಂಟ್ ಮತ್ತು ಸಾರ್ವತ್ರಿಕವಾಗಿ ಸಹಾಯಕವಾದ AI ಅನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ.