Skip to main content

Download Gemini for desktop.

Help right where you work. From drafting documents to exploring creative ideas, Gemini is always just a shortcut away—ready to help right where you are so you never break your flow.

ನಿಮ್ಮ ಡೆಸ್ಕ್‌ಟಾಪ್, Gemini ನಿಂದ ಚಾಲಿತವಾಗಿದೆ.

ನೀವು ಡೆಸ್ಕ್‌ಟಾಪ್‌ನಲ್ಲಿ ನಿಜವಾಗಿಯೂ ಹೇಗೆ ಕೆಲಸ ಮಾಡುತ್ತೀರಿ ಎಂಬುದಕ್ಕಾಗಿ ನಿರ್ಮಿಸಲಾಗಿದೆ. Windows ಮತ್ತು macOS ನಾದ್ಯಂತ ದೈನಂದಿನ ಪ್ರಾಜೆಕ್ಟ್‌ಗಳನ್ನು ನಿಭಾಯಿಸಲು Gemini ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ.

macOS

Google Antigravity ಮೂಲಕ ಕೋಡ್ ಮಾಡಿ.

ಆ್ಯಪ್‌ಗಳನ್ನು ಬಿಲ್ಡ್ ಮಾಡಲು, ಕೋಡ್ ಬರೆಯಲು ಮತ್ತು ಐಡಿಯಾಗಳ ಪ್ರೊಟೊಟೈಪ್ ಸಿದ್ಧಪಡಿಸಲು Gemini ಆ್ಯಪ್‌ನಿಂದ ಕೇವಲ ಒಂದೇ ಕ್ಲಿಕ್‌ನಲ್ಲಿ Antigravity ಅನ್ನು ತೆರೆಯಿರಿ.

Mouse cursor hovering over a white "Antigravity" button with a colorful arc logo, set against a soft blue background.
macOS

ಯಾವುದೇ ಆ್ಯಪ್‌ನೊಂದಿಗೆ ಮುಕ್ತವಾಗಿ ಚರ್ಚಿಸಿ.

ಯಾವುದೇ ಆ್ಯಪ್‍‌ನಲ್ಲಿ ನಿಮ್ಮ ಆಲೋಚನೆಗಳನ್ನು ಮಾತನಾಡಿ ಮತ್ತು Gemini ಸ್ವಯಂಚಾಲಿತವಾಗಿ ನೈಜ ಸಮಯದಲ್ಲಿ ನಿಮ್ಮ ಡಿಕ್ಟೇಶನ್ ಅನ್ನು ಫಾರ್ಮ್ಯಾಟ್ ಮಾಡುತ್ತದೆ ಮತ್ತು ಇಂಪ್ರೂವ್ ಮಾಡುತ್ತದೆ.

ಉತ್ತರಗಳಿಗೆ ಒಂದು ಶಾರ್ಟ್‌ಕಟ್.

ನಿಮ್ಮ ಸಕ್ರಿಯ ಕೆಲಸದ ಮೇಲೆ Gemini ಅನ್ನು ಕರೆಯಲು Windows ನಲ್ಲಿ Alt + Space ಅಥವಾ Mac ನಲ್ಲಿ Option + Space ಅನ್ನು ಒತ್ತಿ. ಪ್ರಶ್ನೆಗಳನ್ನು ಕೇಳಿ, ವಾಸ್ತವಾಂಶಗಳನ್ನು ಪರಿಶೀಲಿಸಿ ಅಥವಾ ಪಠ್ಯವನ್ನು ಡ್ರಾಫ್ಟ್ ಮಾಡಿ, ನಂತರ ನೀವು ಮಾಡುತ್ತಿದ್ದ ಕೆಲಸಕ್ಕೆ ಹಿಂತಿರುಗಿ.

Keyboard shortcuts for macOS (option+spacebar) and Windows (alt+spacebar)

ಕೆಲಸದ ಪಟ್ಟಿಯಿಂದ, ಕೆಲಸ ಮುಗಿದ ಖುಷಿಯವರೆಗೆ.

ನಿಮ್ಮ ದೈನಂದಿನ ಸಣ್ಣಪುಟ್ಟ ಕೆಲಸಗಳನ್ನು Gemini ನಿಮಗಾಗಿ ನಿಭಾಯಿಸಲಿ. ಹಿನ್ನೆಲೆಯಲ್ಲಿ ನಡೆಯುವ ಹಂತ-ಹಂತದ ಕೆಲಸಗಳನ್ನು ನಿರ್ವಹಿಸಲು ಕಾರ್ಯ ಮೋಡ್‌ಗೆ ತಿರುಗಿಸಿ, ನಂತರ ಪ್ರತಿಯೊಂದು ಕ್ರಿಯೆಯನ್ನು ಕೇವಲ ಒಂದು ಟ್ಯಾಪ್ ಮೂಲಕ ಅನುಮೋದಿಸಿ.

    ನಿಮ್ಮ ದೈನಂದಿನ Google ಆ್ಯಪ್‌ಗಳಿಗೆ ಕನೆಕ್ಟ್ ಮಾಡಲಾಗಿದೆ.

    Gmail, Google Drive, Docs ಮತ್ತು Calendar ನಿಂದ ನೇರವಾಗಿ ನಿಮ್ಮ ಡೆಸ್ಕ್‌ಟಾಪ್ ವರ್ಕ್‌ಫ್ಲೋಗೆ ಮಾಹಿತಿಯನ್ನು ಪಡೆದುಕೊಳ್ಳಿ. ಇಮೇಲ್ ಥ್ರೆಡ್‌ಗಳಲ್ಲಿ ಹುದುಗಿರುವ ವಿವರಗಳನ್ನು ಹುಡುಕಲು, ಹಂಚಿಕೊಂಡ ಡಾಕ್ಯುಮೆಂಟ್‌ಗಳನ್ನು ಸಾರಾಂಶಗೊಳಿಸಲು ಅಥವಾ ಮೀಟಿಂಗ್ ಟಿಪ್ಪಣಿಗಳನ್ನು ಕ್ರಾಸ್-ರೆಫರೆನ್ಸ್ ಮಾಡಲು Gemini ಗೆ ಹೇಳಿ.

    Gemini AI interface card surrounded by floating Google Docs, Gmail, Drive, and Calendar icons on a blue background.

    ನಿಮ್ಮ ಡೆಸ್ಕ್‌ಟಾಪ್‌ಗಾಗಿ ಸೃಜನಶೀಲತೆ.

    ಡೆಸ್ಕ್‌ಟಾಪ್‌ನ ಪ್ರತ್ಯೇಕ ಕಾರ್ಯಸ್ಥಳದಲ್ಲಿ ನಿಮ್ಮ ಸೃಜನಾತ್ಮಕ ಪರಿಕಲ್ಪನೆಗಳಿಗೆ ಜೀವ ತುಂಬಿ. Nano Banana ಮೂಲಕ ಕಸ್ಟಮ್ ಚಿತ್ರಗಳನ್ನು ಜನರೇಟ್ ಮಾಡಿ ಮತ್ತು Gemini Omni ಮೂಲಕ ಉನ್ನತ ಗುಣಮಟ್ಟದ ವೀಡಿಯೊ ರಚನೆಯನ್ನು ನಿರ್ದೇಶಿಸಿ, ಸ್ಫೂರ್ತಿ ಬಂದಾಗಲೆಲ್ಲಾ ಬಳಸಲು ಸಿದ್ಧರಾಗಿರಿ.

    Blue gradient menu with options to "Create image", "Create video", "Create music", and "More tools" alongside white icons.

    ನಿಮ್ಮ ಬ್ಯುಸಿ ದಿನಗಳಿಗಾಗಿ ಉಪಯುಕ್ತ ಸಲಹೆಗಳು.

    ಡೆಸ್ಕ್‌ಟಾಪ್‌ನಲ್ಲಿ ಕೆಲಸಗಳನ್ನು ಪೂರ್ಣಗೊಳಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಿ. macOS ನಲ್ಲಿ ಇಂದು ಲಭ್ಯವಿರುವ ಹೆಚ್ಚುವರಿ ಫೀಚರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ, Windows ನಲ್ಲಿ ಶೀಘ್ರದಲ್ಲೇ ಇನ್ನಷ್ಟು ಫೀಚರ್‌ಗಳು ಲಭ್ಯವಾಗಲಿವೆ.

    ಪದೇಪದೇ ಕೇಳಲಾಗುವ ಪ್ರಶ್ನೆಗಳು

    Gemini ಆ್ಯಪ್ ಅನ್ನು ಬೆಂಬಲಿಸುವ ಎಲ್ಲಾ ಭಾಷೆಗಳು ಮತ್ತು ದೇಶಗಳಲ್ಲಿ Gemini ಡೆಸ್ಕ್‌ಟಾಪ್ ಆ್ಯಪ್ ಲಭ್ಯವಿದೆ.

    • Windows: Windows 10 ಅಥವಾ ನಂತರದ ಆವೃತ್ತಿಗಳಲ್ಲಿ (x64 ಮತ್ತು ARM64) ರನ್ ಆಗುತ್ತದೆ.

    • macOS: Apple Silicon MacBook ಗಳಲ್ಲಿ ರನ್ ಆಗುತ್ತದೆ ಮತ್ತು macOS Sequoia (15.0) ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

    ಫೀಚರ್ ಲಭ್ಯತೆಯು ಬದಲಾಗುತ್ತದೆ.

    ನಿಮ್ಮ ಡೆಸ್ಕ್‌ಟಾಪ್‌ನಲ್ಲಿ Gemini ಅನ್ನು ಆ್ಯಕ್ಸೆಸ್ ಮಾಡಲು ಹಲವಾರು ತ್ವರಿತ ಮಾರ್ಗಗಳಿವೆ:

    Windows:

    • ಕಸ್ಟಮೈಸ್ ಮಾಡಬಹುದಾದ ಶಾರ್ಟ್‌ಕಟ್: ಎಲ್ಲಿಂದಲಾದರೂ Gemini ಅನ್ನು ತಕ್ಷಣ ಸಕ್ರಿಯಗೊಳಿಸಲು Alt + Space ಅನ್ನು ಒತ್ತಿ.

    • ಟಾಸ್ಕ್‌ಬಾರ್ ಮತ್ತು ಸಿಸ್ಟಮ್ ಟ್ರೇ: Windows ಟಾಸ್ಕ್‌ಬಾರ್‌ನಿಂದ ಆ್ಯಪ್ ಅನ್ನು ಪ್ರಾರಂಭಿಸಿ ಅಥವಾ ನಿಮ್ಮ ಸಿಸ್ಟಮ್ ಟ್ರೇನಲ್ಲಿರುವ Gemini ಐಕಾನ್ ಅನ್ನು ಕ್ಲಿಕ್ ಮಾಡಿ.

    macOS:

    • ಕಸ್ಟಮೈಸ್ ಮಾಡಬಹುದಾದ ಶಾರ್ಟ್‌ಕಟ್‌ಗಳು: ಮಿನಿ ಚಾಟ್ ಅನ್ನು ತೆರೆಯಲು Option + Space ಅನ್ನು ಒತ್ತಿ ಅಥವಾ ಪೂರ್ಣ ಚಾಟ್ ಅನುಭವಕ್ಕಾಗಿ Option + Shift + Space ಅನ್ನು ಒತ್ತಿ.

    • ಮೆನು ಬಾರ್ ಮತ್ತು Doc: ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಮೆನು ಬಾರ್‌ನಲ್ಲಿರುವ Gemini ಐಕಾನ್ ಅನ್ನು ಆಯ್ಕೆಮಾಡಿ ಅಥವಾ Mac Doc ನಲ್ಲಿ ಅದರ ಐಕಾನ್ ಅನ್ನು ಕ್ಲಿಕ್ ಮಾಡಿ.

    ಸಲಹೆ: Gemini ಆ್ಯಪ್ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಶಾರ್ಟ್‌ಕಟ್ ಕೀಗಳನ್ನು ನೀವು ಯಾವಾಗ ಬೇಕಾದರೂ ಕಸ್ಟಮೈಸ್ ಮಾಡಬಹುದು.

    Gemini macOS ಆ್ಯಪ್‌ನಲ್ಲಿ, ನೀವು ಇವುಗಳನ್ನು ಮಾಡಬಹುದು:

    • ಎರಡೂ ಕಮಾಂಡ್ ಕೀಗಳನ್ನು (⌘ + ⌘) ಒತ್ತುವ ಮೂಲಕ, ನಿಖರವಾದ ಉತ್ತರಗಳಿಗಾಗಿ ನಿಮ್ಮ ಸ್ಕ್ರೀನ್‌ ಕಂಟೆಕ್ಸ್ಟ್ ಅನ್ನು ಹಂಚಿಕೊಳ್ಳಿ.

    • ತೆರೆದಿರುವ ಆ್ಯಪ್‌ಗಳಲ್ಲಿ ಪಠ್ಯವನ್ನು ಉಕ್ತಲೇಖನ ಮಾಡಲು ಮತ್ತು ರೀಫೈನ್ ಮಾಡಲು ನಿಮ್ಮ ಧ್ವನಿಯನ್ನು ಬಳಸಿ.

    • Tasks ಬಳಸಿಕೊಂಡು ನಿಮ್ಮ ಲೋಕಲ್ ಫೈಲ್‌ಗಳನ್ನು ಸಂಘಟಿಸಿ ಮತ್ತು ಅವುಗಳ ಸಾರಾಂಶವನ್ನು Google Docs ಹಾಗೂ Sheets ನಲ್ಲಿ ಪಡೆಯಿರಿ.

    • ಆ್ಯಪ್‌ಗಳನ್ನು ಬಿಲ್ಡ್ ಮಾಡಲು, ಕೋಡ್ ಬರೆಯಲು ಮತ್ತು ಐಡಿಯಾಗಳ ಪ್ರೊಟೊಟೈಪ್ ಸಿದ್ಧಪಡಿಸಲು ಕೇವಲ ಒಂದೇ ಕ್ಲಿಕ್‌ನಲ್ಲಿ Google Antigravity ಅನ್ನು ಪ್ರಾರಂಭಿಸಿ.

    ಕಾಲಕ್ರಮೇಣ Windows ಗೆ ಹೆಚ್ಚಿನ ಸ್ಥಳೀಯ ಸಾಮರ್ಥ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ.

    ಹೌದು! ನೀವು ಅದೇ Google ಖಾತೆಗೆ ಸೈನ್ ಇನ್ ಆಗಿರುವವರೆಗೆ, ನಿಮ್ಮ ಚಾಟ್ ಇತಿಹಾಸ ಮತ್ತು ಮೆಮೊರಿಯು ಎಲ್ಲಾ ಸಾಧನಗಳಾದ್ಯಂತ ಸಿಂಕ್ ಆಗುತ್ತದೆ.

    ವಿವರವಾದ ಸಿಸ್ಟಂ ಅವಶ್ಯಕತೆಗಳು, ಇನ್‌ಸ್ಟಾಲೇಶನ್ ಗೈಡ್‌ಗಳು ಮತ್ತು ಬಳಕೆಯ ಕುರಿತಾದ ಸಲಹೆಗಳಿಗಾಗಿ Windows ಅಥವಾ macOS ಗಾಗಿ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

    ಪ್ರತಿಕ್ರಿಯೆಗಳನ್ನು ಪರಿಶೀಲಿಸಿ. ಸೆಟಪ್ ಮಾಡುವ ಅಗತ್ಯವಿದೆ. ಹೊಂದಾಣಿಕೆ ಮತ್ತು ಲಭ್ಯತೆ ಬದಲಾಗುತ್ತದೆ. ಆಯ್ದ ಫೀಚರ್‌ಗಳು 18+ ವಯಸ್ಸಿನ ಬಳಕೆದಾರರಿಗೆ Google AI ಸಬ್‌ಸ್ಕ್ರಿಪ್ಶನ್‌ನೊಂದಿಗೆ ಲಭ್ಯವಿವೆ.