Skip to main content

Gemini Live

Gemini ಜೊತೆಗೆ Live ಆಗಿ ಮಾತನಾಡಿ Gemini Live1 ಎಂಬುದು Gemini ಜೊತೆಗೆ ಚಾಟ್ ಮಾಡಲು ಹೆಚ್ಚು ಸ್ವಾಭಾವಿಕವಾದ ವಿಧಾನವಾಗಿದೆ. ನಿಮ್ಮ ಆಲೋಚನೆಗಳನ್ನು ಬ್ರೈನ್‌ಸ್ಟಾರ್ಮ್ ಮಾಡಲು ಮತ್ತು ಆರ್ಗನೈಜ್ ಮಾಡಲು Live ಗೆ ಹೋಗಿ ಅಥವಾ ನಿಮ್ಮ ಕ್ಯಾಮರಾ ಅಥವಾ ಸ್ಕ್ರೀನ್ ಅನ್ನು ಹಂಚಿಕೊಳ್ಳಿ ಮತ್ತು ನೈಜ-ಸಮಯದ, ಮಾತಿನ ಪ್ರತಿಕ್ರಿಯೆಗಳನ್ನು ಪಡೆಯಿರಿ. 45+ ಭಾಷೆಗಳಲ್ಲಿ ಮತ್ತು 150 ಕ್ಕೂ ಹೆಚ್ಚು ದೇಶಗಳಲ್ಲಿನ ಮೊಬೈಲ್ ಬಳಕೆದಾರರಿಗೆ ಲಭ್ಯವಿದೆ.

ನೀವು ನೋಡುವ ಯಾವುದೇ ವಿಷಯದ ಕುರಿತು Gemini ಜೊತೆಗೆ ಮಾತನಾಡಿ

ಈಗ ನೀವು ನಿಮ್ಮ ಸುತ್ತಮುತ್ತ ಇರುವ ಅಥವಾ ನಿಮ್ಮ ಸ್ಕ್ರೀನ್ ಮೇಲಿನ ಯಾವುದೇ ವಿಷಯದ ಕುರಿತು Gemini ಜೊತೆಗೆ ಸಂಭಾಷಣೆ ನಡೆಸಬಹುದು.

ವೀಡಿಯೊ

ಈಗ ನೀವು ನೋಡುತ್ತಿರುವ ಯಾವುದರ ಕುರಿತಾದರೂ ಸಹಾಯ ಪಡೆಯಲು, ನಿಮ್ಮ ಫೋನ್‌ನ ಕ್ಯಾಮರಾವನ್ನು ನೀವು ಹಂಚಿಕೊಳ್ಳಬಹುದು. ನಿಮ್ಮ ಅಪಾರ್ಟ್‌ಮೆಂಟ್‌ನ ಈ ಸಣ್ಣ ಮೂಲೆಯಲ್ಲಿ ಇಡಬಹುದಾದ ಸ್ಟೋರೇಜ್ ಕುರಿತಾಗಿ ಐಡಿಯಾಗಳನ್ನು ಕೇಳಿ, ನಿಮ್ಮ ನೈಟ್ ಔಟ್‌ಗಾಗಿ ಯಾವ ಡ್ರೆಸ್ ಸೂಕ್ತ ಎಂದು ಹುಡುಕಲು ಸಹಾಯ ಪಡೆಯಿರಿ ಅಥವಾ ನಿಮ್ಮ ಕಾಫಿ ಮಷೀನ್ ಅನ್ನು ಸರಿಪಡಿಸಲು ಸ್ಟೆಪ್-ಬೈ-ಸ್ಟೆಪ್ ಮಾರ್ಗದರ್ಶನವನ್ನು ಪಡೆಯಿರಿ.

ಸ್ಕ್ರೀನ್‌ ಹಂಚಿಕೆ

ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತಿರುವ ಯಾವುದೇ ಅಂಶದ ಕುರಿತಾದರೂ ತ್ವರಿತ ಸಹಾಯ ಪಡೆಯಿರಿ. ನಿಮ್ಮ ಸ್ಕ್ರೀನ್ ಅನ್ನು Gemini ಜೊತೆ ಹಂಚಿಕೊಳ್ಳಿ, ನಿಮ್ಮ ಮುಂದಿನ ಪೋಸ್ಟ್‌ಗೆ ಸೂಕ್ತವಾದ ಫೋಟೋಗಳನ್ನು ಆಯ್ಕೆ ಮಾಡಿ, ಆ ಹೊಸ ಪರ್ಸ್ ಕುರಿತು ಎರಡನೇ ಅಭಿಪ್ರಾಯವನ್ನು ಕೇಳಿ ಅಥವಾ ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳ ಮೆನು ಬಗ್ಗೆ ಕೇಳಿ.

ಸಹಜವಾಗಿ ಚಾಟ್ ಮಾಡಿ

ವಿಸ್ತ್ರುತವಾಗಿ ಬ್ರೈನ್‌ಸ್ಟಾರ್ಮ್ ಮಾಡಲು Live ಗೆ ಹೋಗಿ. Gemini ನಿಮ್ಮ ಮಾತುಕತೆಯ ಶೈಲಿಗೆ ಹೊಂದಿಕೊಳ್ಳುತ್ತದೆ, ಆದ್ದರಿಂದ ನೀವು ವಾಕ್ಯದ ಮಧ್ಯದಲ್ಲಿ ನಿಮ್ಮ ಮನಸ್ಸನ್ನು ಬದಲಾಯಿಸಬಹುದು, ಫಾಲೋ-ಅಪ್ ಪ್ರಶ್ನೆಗಳನ್ನು ಕೇಳಬಹುದು ಮತ್ತು ಸುಲಭವಾಗಿ ಹಲವಾರು ಕೆಲಸಗಳನ್ನು ಮಾಡಬಹುದು. ಅಡಚಣೆ ಮಾಡಬೇಕೇ ಅಥವಾ ವಿಷಯವನ್ನು ಬದಲಾಯಿಸಬೇಕೇ? ನೀವು ಸಂಭಾಷಣೆಯನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುತ್ತೀರೋ, Gemini Live ಸುಲಭವಾಗಿ ಆ ದಿಕ್ಕಿನಲ್ಲಿ ಸಾಗಬಲ್ಲದು.

ನಿಮ್ಮ ಕುತೂಹಲವನ್ನು ಹೆಚ್ಚಿಸಿಕೊಳ್ಳಿ

ಸ್ಫೂರ್ತಿ ಬಂದಾಗಲೆಲ್ಲಾ ತ್ವರಿತ ಕಲಿಕೆಯನ್ನು ಅನ್‌ಲಾಕ್ ಮಾಡಿ - ನೀವು ಮುಂಬರುವ ಪ್ರವಾಸಕ್ಕಾಗಿ ನಿಮ್ಮ ಫ್ರೆಂಚ್ ಭಾಷಾ ಕೌಶಲ್ಯ ಬೆಳೆಸಿಕೊಳ್ಳಲು ಅಭ್ಯಾಸ ಮಾಡುತ್ತಿರಿ, ಸಂದರ್ಶನಕ್ಕೆ ತಯಾರಿ ನಡೆಸುತ್ತಿರಿ ಅಥವಾ ಶಾಪಿಂಗ್ ಮಾಡುವಾಗ ಸಲಹೆಗಾಗಿ ಹುಡುಕುತ್ತಿರಿ. ನಿಮ್ಮ ಕೌಶಲ್ಯಗಳನ್ನು ಸುಧಾರಿಸಿ, ಹೊಸ ವಿಷಯಗಳನ್ನು ಎಕ್ಸ್‌ಪ್ಲೋರ್ ಮಾಡಿ ಮತ್ತು Gemini ನ ಸಣ್ಣ ಪ್ರಮಾಣದ ಸಹಾಯದೊಂದಿಗೆ ಐಡಿಯಾಗಳ ಕುರಿತು ಕೊಲಬೊರೇಟ್ ಮಾಡಿ. ನಿಮ್ಮ ಬೆರಳ ತುದಿಯಲ್ಲಿ ಉಪಯುಕ್ತವಾದ ಮಾರ್ಗದರ್ಶಿ ಮತ್ತು ಕ್ರಿಯೇಟಿವ್ ಪಾರ್ಟ್‌ನರ್ ಅನ್ನು ಹೊಂದುವ ಅನುಕೂಲವನ್ನು ಅನುಭವಿಸಿ.

ಪಠ್ಯವಷ್ಟೇ ಅಲ್ಲ, ಅದರ ಹೊರತಾಗಿ ಸಹ ಮಾತನಾಡಿ

ನಿಮ್ಮ ಮಾತುಕತೆಗಳಿಗೆ ಸಾಂದರ್ಭಿಕತೆಯನ್ನು ಸೇರಿಸಿ. ನೀವು ಏನು ನೋಡುತ್ತಿದ್ದೀರಿ, ಕೆಲಸ ಮಾಡುತ್ತಿದ್ದೀರಿ ಅಥವಾ ವೀಕ್ಷಿಸುತ್ತಿದ್ದೀರಿ ಎಂಬುದನ್ನು ಹಂಚಿಕೊಳ್ಳಿ ಮತ್ತು Gemini ಸೂಕ್ತವಾದ ಸಹಾಯ ಮತ್ತು ಒಳನೋಟಗಳನ್ನು ಒದಗಿಸುತ್ತದೆ. ನೀವು ಓದುತ್ತಿರುವ ಲೇಖನದ ಕುರಿತು ಪ್ರಶ್ನೆಗಳನ್ನು ಕೇಳುವುದರಿಂದ ಹಿಡಿದು, ಹಂತ-ಹಂತದ ಪ್ರಾಜೆಕ್ಟ್ ಮಾರ್ಗದರ್ಶನವನ್ನು ಪಡೆಯಲು ನಿಮ್ಮ ಕ್ಯಾಮರಾವನ್ನು ಹಂಚಿಕೊಳ್ಳುವವರೆಗೆ, ನೀವು ನೋಡುತ್ತಿರುವ ಯಾವುದೇ ವಿಷಯದ ಕುರಿತು Gemini ಆಳವಾಗಿ, ವಿಸ್ತ್ರುತವಾದ, ಹೆಚ್ಚು ಡೈನಾಮಿಕ್ ಆದ ಮಾತುಕತೆಗಳನ್ನು ರಚಿಸಲು ಸಿದ್ಧವಾಗಿದೆ.

ಕನೆಕ್ಟ್ ಮಾಡಲಾದ ಆ್ಯಪ್‌ಗಳು

Gemini Live, Google Maps, Calendar, Tasks ಮತ್ತು Keep ನಿಂದ ಪ್ರಾರಂಭಿಸಿ, ನೀವು ಪ್ರತಿದಿನ ಬಳಸುವ ಆ್ಯಪ್‌ಗಳೊಂದಿಗೆ ಇಂಟಿಗ್ರೇಟ್ ಆಗುತ್ತದೆ. ಸ್ವಾಭಾವಿಕವಾದ, ಸಂವಾದಾತ್ಮಕ ರೀತಿಯಲ್ಲಿ ಬ್ರೈನ್‌ಸ್ಟಾರ್ಮ್ ಮಾಡಿ, ಪ್ಲಾನ್ ಮಾಡಿ ಮತ್ತು ನಿಮಗೆ ಹೆಚ್ಚು ಮುಖ್ಯವಾದ ವಿಷಯಗಳ ಕುರಿತು ಅಪ್ ಟು ಡೇಟ್ ಆಗಿರಿ.

  • 1.

    ನಿಖರತೆಗಾಗಿ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ. ಕೆಲವು ಫೀಚರ್‌ಗಳು ಮತ್ತು ಖಾತೆಗಳ ಜೊತೆ ಹೊಂದಾಣಿಕೆಯಾಗುತ್ತದೆ. ಇಂಟರ್‌ನೆಟ್ ಕನೆಕ್ಷನ್ ಅಗತ್ಯವಿದೆ. ಆಯ್ದ ಸಾಧನಗಳಲ್ಲಿ ಮತ್ತು ಆಯ್ದ ದೇಶಗಳು, ಭಾಷೆಗಳಲ್ಲಿ ಹಾಗೂ 18+ ವರ್ಷ ವಯಸ್ಸಿನ ಬಳಕೆದಾರರಿಗೆ ಲಭ್ಯವಿದೆ.