ಪರಿಚಯಿಸುತ್ತಿದ್ದೇವೆ, Chrome ನಲ್ಲಿ Gemini
ನಿಮ್ಮ ಬ್ರೌಸರ್‌ನಲ್ಲಿಯೇ AI ಸಹಾಯ ಲಭ್ಯವಿದೆ.
ನೀವು ಇರುವ ಸ್ಥಳದಲ್ಲೇ, ನಿಮ್ಮ ಜೊತೆ ಕೆಲಸ ಮಾಡುವ ಇಂಟೆಲಿಜೆನ್ಸ್.
ನಿಮ್ಮ ತೆರೆದ ಟ್ಯಾಬ್‌ಗಳ ಸಂದರ್ಭವನ್ನು ಆಧರಿಸಿ ಮುಖ್ಯ ಸಾರಾಂಶಗಳನ್ನು ಪಡೆಯಿರಿ, ಪರಿಕಲ್ಪನೆಗಳನ್ನು ಸ್ಪಷ್ಟಪಡಿಸಿಕೊಳ್ಳಿ ಮತ್ತು ಉತ್ತರಗಳನ್ನು ಹುಡುಕಿ.
ಅಗತ್ಯ ವಿಷಯಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಬೇಕೇ? Gemini ಲೇಖನಗಳು, ಪುಟಗಳು ಅಥವಾ ಥ್ರೆಡ್‌ಗಳ ಸಂಕ್ಷಿಪ್ತ ಸಾರಾಂಶಗಳನ್ನು ನಿಮ್ಮ ಬ್ರೌಸರ್‌ನಲ್ಲಿ ನೇರವಾಗಿ ನೀಡುತ್ತದೆ, ಇದರಿಂದ ಮುಖ್ಯ ಅಂಶಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
ನೀವು ಓದುತ್ತಿರುವ ವಿಷಯದ ಕುರಿತು ಏನಾದರೂ ಪ್ರಶ್ನೆ ಇದೆಯೇ? Gemini ಅನ್ನು ಕೇಳಿ. ಇದು ಸಂಬಂಧಿಸಿದ ಉತ್ತರಗಳು ಮತ್ತು ವಿವರಣೆಗಳನ್ನು ಒದಗಿಸಲು ನಿಮ್ಮ ತೆರೆದ ಟ್ಯಾಬ್‌ಗಳ ಸಂದರ್ಭವನ್ನು ಬಳಸುತ್ತದೆ, ಆ ಮೂಲಕ ನೀವು ಗಮನಹರಿಸುವಂತೆ ಮಾಡುತ್ತದೆ.
ಸರಳ ವಿವರಣೆಗಳ ಬದಲಿಗೆ ಹೆಚ್ಚು ಆಳವಾದ ವಿವರಣೆಗಳನ್ನು ಪಡೆಯಿರಿ. ನೀವು ಸಂಕೀರ್ಣ ವಿಷಯಗಳು ಅಥವಾ ಹೊಸ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವಾಗ, ಗೊಂದಲಮಯ ಭಾಗಗಳನ್ನು ಸ್ಪಷ್ಟಪಡಿಸುವುದು ಮಾತ್ರವಲ್ಲದೇ, ಮಟಿರಿಯಲ್ ಜೊತೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಕ್ಕೆ ನಿಮಗೆ ನೆರವಾಗಲು Gemini ಅನ್ನು ಕೇಳಿ.
ಉತ್ಪನ್ನಗಳ ಕುರಿತು ಪರಿಶೀಲಿಸುತ್ತಿದ್ದೀರಾ ಅಥವಾ ಯಾವುದನ್ನು ಆರಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ? ಪುಟದಿಂದ ಪ್ರಮುಖ ಮಾಹಿತಿ, ಸ್ಪೆಸಿಫಿಕೇಶನ್‌ಗಳು ಅಥವಾ ಸಾಧಕ-ಬಾಧಕಗಳ ಮಾಹಿತಿಯನ್ನು ನೀಡಲು Gemini ಅನ್ನು ಕೇಳಿ, ಇದು ನಿಮಗೆ ಸ್ಪಷ್ಟತೆಯಿಂದ, ಸುಲಭವಾಗಿ ಸೂಕ್ತ ಆಯ್ಕೆಗಳನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒಂದು ವಿಷಯದ ಕುರಿತು ಬ್ರೈನ್‌ಸ್ಟಾರ್ಮ್ ಮಾಡಲು, ಐಡಿಯಾಗಳನ್ನು ವ್ಯವಸ್ಥಿತಗೊಳಿಸಲು ಅಥವಾ ಆಳವಾಗಿ ತಿಳಿದುಕೊಳ್ಳಲು ಬಯಸುತ್ತಿದ್ದೀರಾ? Gemini Live ಮೂಲಕ ಸ್ವಾಭಾವಿಕವಾಗಿ ಚಾಟ್ ಮಾಡಿ ಮತ್ತು ಮಾತಿನ ಉತ್ತರಗಳನ್ನು ಪಡೆಯಿರಿ, ಇವೆಲ್ಲವನ್ನೂ Chrome ನಲ್ಲೇ ಮಾಡಿ.
ನಿಮ್ಮ ಕಂಪ್ಯೂಟರ್‌ನಲ್ಲಿ ಮಾಡುವಂತೆಯೇ, ನೀವು ಓದುತ್ತಿರುವುದರ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಮೊಬೈಲ್‌ನಲ್ಲಿನ Gemini ಇದೆ. Android ನಲ್ಲಿ, Chrome ಸೇರಿದಂತೆ ನಿಮ್ಮ ಸ್ಕ್ರೀನ್‌ನ ಮೇಲಿರುವ ಯಾವುದರ ಜೊತೆಗೆ ಬೇಕಾದರೂ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಶೀಘ್ರದಲ್ಲೇ iOS ಗೆ ಲಭ್ಯವಾಗಲಿದ್ದು, Gemini ಅನ್ನು Chrome ಆ್ಯಪ್‌ನಲ್ಲಿಯೇ ನಿರ್ಮಿಸಲಾಗುತ್ತದೆ.
ನಿಮ್ಮ ವೆಬ್, ನಿಯಂತ್ರಣ ನಿಮ್ಮ ಕೈಯಲ್ಲಿರುತ್ತದೆ
Chrome ನಲ್ಲಿ Gemini ನಿಮ್ಮ ನಿಯಮಗಳ ಮೇರೆಗೆ, ನಿಮ್ಮ ಜೊತೆ ಕೆಲಸ ಮಾಡುತ್ತದೆ. ನೀವು ಕೇಳಿದಾಗ ಮಾತ್ರ ಅದು ಸಹಾಯ ಮಾಡುತ್ತದೆ, ನಿಯಂತ್ರಣ ನಿಮ್ಮ ಕೈಯಲ್ಲಿರುತ್ತದೆ.
ನೀವು ಸಿದ್ಧರಾಗಿದ್ದರೆ ನಾನು ಸಿದ್ಧ
ನೀವು Gemini ಐಕಾನ್ ಅಥವಾ ನೀವು ಸೆಟಪ್ ಮಾಡುವ ಕೀಬೋರ್ಡ್ ಶಾರ್ಟ್‌ಕಟ್ ಅನ್ನು ಕ್ಲಿಕ್ ಮಾಡುವ ಮೂಲಕ ಅದನ್ನು ಬಳಸುವ ಆಯ್ಕೆಯನ್ನು ಮಾಡಿದಾಗ ಮಾತ್ರ Chrome ನಲ್ಲಿ Gemini ಸಕ್ರಿಯಗೊಳ್ಳುತ್ತದೆ. ಇದು ನಿಮ್ಮ ನಿಯಮಗಳ ಮೇರೆಗೆ ಸಹಾಯ ಮಾಡುತ್ತದೆ, ನೀವು ಕೇಳಿದಾಗ ಮಾತ್ರ ನೆರವಿಗೆ ಬರುತ್ತದೆ.
ನಿಮಗೆ ಬೇಕಾದ ರೀತಿಯಲ್ಲಿ ಸಹಾಯ ಪಡೆಯಿರಿ
Chrome ನಲ್ಲಿ Gemini ನೆರವಿನಿಂದ ನಿಮಗೆ ಬೇಕಾದ ರೀತಿಯಲ್ಲಿ ಸಹಾಯ ಪಡೆಯಿರಿ. ನಿಮ್ಮ ಪ್ರಶ್ನೆಯನ್ನು ಸ್ವಾಭಾವಿಕವಾಗಿ ಮಾತನಾಡುವ ಮೂಲಕ ಹೇಳಿ ಅಥವಾ ಟೈಪ್ ಮಾಡಿ ಮತ್ತು ಕಂಟೆಂಟ್ ಅನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಅಥವಾ ಬೋರಿಂಗ್ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ ನಿಮಗೆ ಸಹಾಯ ಮಾಡಲು ಪುಟದ ಕಂಟೆಂಟ್ ಅನ್ನು Gemini ಬಳಸಿಕೊಳ್ಳಬಲ್ಲದು.
ನಿಮ್ಮ ಚಟುವಟಿಕೆಯನ್ನು ಸುಲಭವಾಗಿ ನಿರ್ವಹಿಸಿ
ನಿಮ್ಮ ಚಟುವಟಿಕೆಯನ್ನು ನಿರ್ವಹಿಸಲು, ಅಳಿಸಲು ಮತ್ತು ಆಫ್ ಮಾಡಲು ನೀವು ಯಾವಾಗ ಬೇಕಾದರೂ ನಿಮ್ಮ Gemini ಆ್ಯಪ್‌ಗಳ ಚಟುವಟಿಕೆಯನ್ನು ಆ್ಯಕ್ಸೆಸ್ ಮಾಡಬಹುದು.
ರಿಇಮ್ಯಾಜಿನ್ ಮಾಡಲಾದ ವೆಬ್.
Chrome ನಲ್ಲಿ Gemini ನೆರವಿನಿಂದ, ನಿಮ್ಮ ಬ್ರೌಸರ್‌ನಲ್ಲಿಯೇ AI ಸಹಾಯ ದೊರೆಯುವುದರಿಂದ ಯಾವುದೇ ಟ್ಯಾಬ್ ಬದಲಿಸುವ ಅಗತ್ಯವಿಲ್ಲ, ಇದು ಕಂಟೆಂಟ್ ಅನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಅಥವಾ ನಿಮ್ಮ ತೆರೆದ ಟ್ಯಾಬ್‌ಗಳ ಸಂದರ್ಭವನ್ನು ಬಳಸಿಕೊಂಡು ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
ಪದೇಪದೇ ಕೇಳಲಾಗುವ ಪ್ರಶ್ನೆಗಳು
Chrome ನಲ್ಲಿ Gemini ಫೀಚರ್ ಸಹಾಯದಿಂದ, ಮುಖ್ಯ ಸಾರಾಂಶಗಳನ್ನು ಪಡೆದುಕೊಳ್ಳುವುದು, ಪರಿಕಲ್ಪನೆಗಳನ್ನು ಪಡೆದುಕೊಳ್ಳುವುದು, ಉತ್ತರಗಳನ್ನು ಹುಡುಕುವುದು ಮತ್ತು ಇತ್ಯಾದಿಗಳನ್ನು ಸುಲಭವಾಗಿ ಮಾಡುವುದಕ್ಕಾಗಿ ನಿಮ್ಮ ಬ್ರೌಸರ್‌ನಿಂದ ನೀವು AI ಸಹಾಯವನ್ನು ಪಡೆಯಬಹುದು. ಹೆಚ್ಚು ಸೂಕ್ತವಾದ ಪ್ರತಿಕ್ರಿಯೆಗಳನ್ನು ಒದಗಿಸಲು, Chrome ನಲ್ಲಿ Gemini ನಿಮ್ಮ ತೆರೆದ ಟ್ಯಾಬ್‌ಗಳ ಸಂದರ್ಭವನ್ನು ಬಳಸುತ್ತದೆ.
Chrome ನಲ್ಲಿ Gemini ಎಂಬುದು ಡೆಸ್ಕ್‌ಟಾಪ್‌ನಲ್ಲಿರುವ Chrome ಬ್ರೌಸರ್‌ನ ಭಾಗವಾಗಿದೆ ಮತ್ತು gemini.google.com ಮೂಲಕ ಯಾವುದೇ ಬ್ರೌಸರ್‌ನಲ್ಲಿ Gemini ಗೆ ಭೇಟಿ ನೀಡುವುದು ಅಥವಾ Chrome ನಲ್ಲಿನ ವಿಳಾಸ ಪಟ್ಟಿಯಲ್ಲಿ @gemini ಎಂದು ಟೈಪ್ ಮಾಡುವ ಮೂಲಕ Gemini ವೆಬ್ ಆ್ಯಪ್ ಜೊತೆ ಚಾಟ್ ಪ್ರಾರಂಭಿಸುವುದಕ್ಕಿಂತ ಇದು ಭಿನ್ನವಾಗಿದೆ. ನೀವು ಇತರ ಬ್ರೌಸರ್‌ಗಳಲ್ಲಿ (ಅಥವಾ Chrome ನ ಕಂಟೆಂಟ್ ಏರಿಯಾ) Gemini ವೆಬ್ ಆ್ಯಪ್ ಅನ್ನು ಬಳಸಬಹುದು, ಆದರೆ Chrome ನಲ್ಲಿ Gemini ಮೂಲಕ ನಿಮಗೆ ಮಾಡಲು ಸಾಧ್ಯವಿರುವ ಹಾಗೆ ಪುಟದ ಕಂಟೆಂಟ್ ಅನ್ನು ಹಂಚಿಕೊಳ್ಳಲು ಅಥವಾ Live ಮೋಡ್ ಅನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ.
ನೀವು Chrome ನಲ್ಲಿ Gemini ಅನ್ನು Chrome ಟೂಲ್‌ಬಾರ್‌ನಲ್ಲಿರುವ Gemini ಐಕಾನ್ ಮೂಲಕ ಅಥವಾ Windows ಅಥವಾ Mac ಡೆಸ್ಕ್‌ಟಾಪ್‌ನಲ್ಲಿ ನೀವು ಸೆಟಪ್ ಮಾಡುವ ಕೀಬೋರ್ಡ್ ಶಾರ್ಟ್‌ಕಟ್ ಮೂಲಕ ಆ್ಯಕ್ಸೆಸ್ ಮಾಡಬಹುದು.
Android ಮತ್ತು ಇತರ ಆ್ಯಪ್‌ಗಳಲ್ಲಿ Chrome ಬಳಸುವಾಗ, ಪವರ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸಹ ನೀವು Gemini ಅನ್ನು ಸಕ್ರಿಯಗೊಳಿಸಬಹುದು. ಮತ್ತು ಶೀಘ್ರದಲ್ಲೇ, iOS ನಲ್ಲಿ Chrome ನಲ್ಲಿ Gemini ಅನ್ನು ಆ್ಯಪ್‌ನಲ್ಲಿ ಸೇರಿಸಲಾಗುತ್ತಿದ್ದು, ಅದು Chrome ಆಮ್ನಿಬಾಕ್ಸ್ ಮೂಲಕ ಆ್ಯಕ್ಸೆಸ್ ಹೊಂದಿರುತ್ತದೆ.
Chrome ಭಾಷೆಯನ್ನು ಇಂಗ್ಲೀಷ್‌ಗೆ ಸೆಟ್ ಮಾಡಿರುವ US ನಲ್ಲಿರುವ ಎಲ್ಲಾ ಅರ್ಹ Mac ಮತ್ತು Windows ಬಳಕೆದಾರರಿಗೆ Chrome ನಲ್ಲಿ Gemini ಅನ್ನು ಪರಿಚಯಿಸಲಾಗುತ್ತಿದೆ. ಈ ಫೀಚರ್ ಅನ್ನು ಶೀಘ್ರದಲ್ಲೇ ಇನ್ನಷ್ಟು ಜನರಿಗೆ ಮತ್ತು ಹೆಚ್ಚುವರಿ ಭಾಷೆಗಳಿಗೆ ಲಭ್ಯವಾಗಿಸಲು ನಾವು ಎದುರು ನೋಡುತ್ತಿದ್ದೇವೆ.
Chrome ಭಾಷೆಯನ್ನು ಇಂಗ್ಲೀಷ್‌ಗೆ ಸೆಟ್ ಮಾಡಿರುವ US ನಲ್ಲಿರುವ ಅರ್ಹ iPhone ಬಳಕೆದಾರರಿಗೆ iOS ನಲ್ಲಿ Chrome ನಲ್ಲಿ Gemini ಶೀಘ್ರದಲ್ಲೇ ಲಭ್ಯವಾಗಲಿದೆ.
ಪ್ರತಿಕ್ರಿಯೆಗಳನ್ನು ಪರಿಶೀಲಿಸಿ. ಸೆಟಪ್ ಮಾಡುವ ಅಗತ್ಯವಿದೆ. ಹೊಂದಾಣಿಕೆ ಮತ್ತು ಲಭ್ಯತೆ ಬದಲಾಗುತ್ತದೆ. 18+